alex Certify ಉದೋಗಾಕಾಂಕ್ಷಿಗಳೇ ಗಮನಿಸಿ: ಈ ಬ್ಯಾಂಕ್ ನೀಡ್ತಿದೆ 14000 ಜನರಿಗೆ ನೌಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದೋಗಾಕಾಂಕ್ಷಿಗಳೇ ಗಮನಿಸಿ: ಈ ಬ್ಯಾಂಕ್ ನೀಡ್ತಿದೆ 14000 ಜನರಿಗೆ ನೌಕರಿ

ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಕೆಲಸ ಮಾಡಲು ಬಯಸಿದವರಿಗೊಂದು ಅವಕಾಶವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದೆ. ಇದಕ್ಕಾಗಿ ಈ ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್ ತನ್ನ ಬ್ಯಾಂಕ್ ಮಿತ್ರ (Bank Correspondent) ಸಂಖ್ಯೆಯನ್ನು 25,000 ಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ.

ಸದ್ಯ ಬ್ಯಾಂಕ್ ಮಿತ್ರರ ಸಂಖ್ಯೆ 11 ಸಾವಿರವಿದೆ. ಇದನ್ನು 25,000 ಕ್ಕೆ ಹೆಚ್ಚಿಸುವುದು ಬ್ಯಾಂಕ್ ಉದ್ದೇಶವಾಗಿದೆ. ಖಾತೆ ತೆರೆಯುವುದು, ಟರ್ಮ್ ಠೇವಣಿ, ಸಾಲಗಳು ಸೇರಿದಂತೆ ಎಲ್ಲ ಸೇವೆಗಳನ್ನು ಬ್ಯಾಂಕ್ ಮಿತ್ರ ಒದಗಿಸುತ್ತದೆ.

ಲಾಕ್‌ ಡೌನ್‌ನಲ್ಲಿ ಬ್ಯಾಂಕ್ ಮಿತ್ರ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಸರ್ಕಾರ ನೆರವಿನ ಹಣವನ್ನು ಜನ ಧನ್ ಮತ್ತು ಇತರ ಖಾತೆಗಳಿಗೆ ವರ್ಗಾಯಿಸಿದಾಗಿನಿಂದ ಬ್ಯಾಂಕುಗಳಲ್ಲಿನ ಗ್ರಾಹಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಜನಸಂದಣಿಯನ್ನು ತಪ್ಪಿಸಲು ಬ್ಯಾಂಕುಗಳು ಬ್ಯಾಂಕ್ ಮಿತ್ರ ಶುರು ಮಾಡಿವೆ. ಇವರು ಗ್ರಾಹಕರ ಮನೆ ಮನೆಗೆ ಸೇವೆ ಒದಗಿಸುತ್ತಿದ್ದಾರೆ.

ಬ್ಯಾಂಕ್ ಮಿತ್ರರು, ಪ್ರಧಾನ್ ಮಂತ್ರಿ ಧನ್ ಯೋಜನೆ ಅಡಿಯಲ್ಲಿ ಉಳಿತಾಯ ಮತ್ತು ಇತರ ಸೌಲಭ್ಯಗಳ ಬಗ್ಗೆ ಜನರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡ್ತಾರೆ. ಉಳಿತಾಯ ಮತ್ತು ಸಾಲಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಮತ್ತು ಸಲಹೆಯನ್ನು ನೀಡಲಾಗುತ್ತದೆ. ಗ್ರಾಹಕರನ್ನು ಗುರುತಿಸುವುದು. ಪ್ರಾಥಮಿಕ ಮಾಹಿತಿ, ಡೇಟಾವನ್ನು ಸಂಗ್ರಹಿಸುವುದು, ಫಾರ್ಮ್‌ಗಳನ್ನು ಇಡುವ ಕೆಲಸ ಮಾಡಬೇಕು. ಜನರು ನೀಡಿದ ಮಾಹಿತಿಯನ್ನು ಪರಿಶೀಲಿಸುವುದು. ಖಾತೆದಾರ ನೀಡಿದ ಮೊತ್ತವನ್ನು ನಿರ್ವಹಿಸುವುದು ಮತ್ತು ಠೇವಣಿ ಇಡುವುದು ಮಾಡಬೇಕು. ಅರ್ಜಿ ಮತ್ತು ಖಾತೆಗಳಿಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡುವುದು. ಸಮಯಕ್ಕೆ ಸರಿಯಾಗಿ ಪಾವತಿ ಮತ್ತು ಠೇವಣಿ ಇಡುವುದು, ಖಾತೆಗಳು ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು.

ಬ್ಯಾಂಕುಗಳು ನಿಯತಕಾಲಿಕವಾಗಿ ಅದರ ನೇಮಕಾತಿಗಾಗಿ ಜಾಹೀರಾತುಗಳನ್ನು ನೀಡುತ್ತವೆ. ಬ್ಯಾಂಕ್‌ ಮಿತ್ರದ ವೆಬ್‌ ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಫಾರ್ಮ್ ಭರ್ತಿ ಮಾಡಬೇಕು. ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಅರ್ಜಿಯನ್ನು ಪ್ರಾಥಮಿಕ ಪರಿಶೀಲನೆಗಾಗಿ ಕಳುಹಿಸಲಾಗುತ್ತದೆ. ಪರಿಶೀಲನೆಯ ನಂತ್ರ ಅರ್ಜಿಯನ್ನು ಆಯ್ದ ಬ್ಯಾಂಕ್ ಮತ್ತು ಬಿ.ಸಿ.ಗೆ ಕಳುಹಿಸಲಾಗುತ್ತದೆ. ನಂತ್ರ ಆಯ್ಕೆ ವಿಷ್ಯವನ್ನು ಪ್ರಕಟಿಸಲಾಗುವುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...