alex Certify ಅಮೆಜಾನ್, ಫ್ಲಿಪ್ಕಾರ್ಟ್ ಜೊತೆಗಿನ ಸ್ಪರ್ಧೆಗೆ ಜಿಯೋ ಮಾರ್ಟ್ ಸಜ್ಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್, ಫ್ಲಿಪ್ಕಾರ್ಟ್ ಜೊತೆಗಿನ ಸ್ಪರ್ಧೆಗೆ ಜಿಯೋ ಮಾರ್ಟ್ ಸಜ್ಜು

ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಇ-ಕಾಮರ್ಸ್ ಕಂಪನಿಗಳಿಗೆ ಟಕ್ಕರ್ ನೀಡಲು ರಿಲಾಯನ್ಸ್ ಜಿಯೋ, ಜಿಯೋ ಮಾರ್ಟ್ ಶುರು ಮಾಡಿದೆ. 200 ನಗರಗಳಲ್ಲಿ ಜಿಯೋ ಮಾರ್ಟ್ ಸೇವೆ ಲಭ್ಯವಿದೆ. ಜಿಯೋ ಮಾರ್ಟ್ ಆರಂಭದಲ್ಲಿ ಮುಂಬೈ ಉಪನಗರಗಳಲ್ಲಿ ಪ್ರಯೋಗ ನಡೆಸಿತ್ತು. ಈಗ ಚೆನ್ನೈ, ಮುಂಬೈ, ಬೆಂಗಳೂರು ಸೇರಿದಂತೆ 200 ನಗರಗಳಲ್ಲಿ ಕಿರಾಣಿ ವಸ್ತುಗಳನ್ನು ಜಿಯೋ ಮಾರ್ಟ್ ಒದಗಿಸುತ್ತಿದೆ.

ಹೆಚ್ಚಿನ ಸ್ಪರ್ಧೆಯಿರುವ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಜಿಯೋ ಮಾರ್ಟ್ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ವೇಗದ ವಿತರಣೆ, ಉತ್ತಮ ಬೆಲೆ ತಂತ್ರಗಳೊಂದಿಗೆ ಕಂಪನಿಯು ಈ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ನೆರೆಹೊರೆಯ ಅಂಗಡಿಯಿದಲೇ ಗ್ರಾಹಕರಿಗೆ ವಸ್ತುಗಳನ್ನು ನೀಡುವುದ್ರಿಂದ ವೇಗ ಹೆಚ್ಚಾಗುವ ಜೊತೆಗೆ ಗ್ರಾಹಕರನ್ನು ಸೆಳೆಯಬಹುದು ಎಂದು ಕಂಪನಿ ಹೇಳಿದೆ. ಹೆಚ್ಚು ಸ್ಪರ್ಧಾತ್ಮಕ ಬೆಲೆಯನ್ನು ನೀಡುತ್ತಿದೆ. ದೇಶದ ಎಲ್ಲಾ ದೊಡ್ಡ ನಗರಗಳು ಮತ್ತು ಪಟ್ಟಣಗಳಲ್ಲಿ ಜಿ ಮಾರ್ಟ್ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...