alex Certify ಅನಿಲ್ ಅಂಬಾನಿ ಸಮೂಹದ ಮುಖ್ಯ ಕಚೇರಿ ವಶಕ್ಕೆ ಪಡೆದ ‘ಯೆಸ್ ಬ್ಯಾಂಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಲ್ ಅಂಬಾನಿ ಸಮೂಹದ ಮುಖ್ಯ ಕಚೇರಿ ವಶಕ್ಕೆ ಪಡೆದ ‘ಯೆಸ್ ಬ್ಯಾಂಕ್’

ರಿಲಯನ್ಸ್ ಸಂಸ್ಥಾಪಕ ಧೀರೂಬಾಯಿ ಅಂಬಾನಿಯವರ ಇಬ್ಬರು ಪುತ್ರರ ಪೈಕಿ ಹಿರಿಯ ಮಗ ಮುಖೇಶ್ ಅಂಬಾನಿ, ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದರೆ ಕಿರಿಯ ಮಗ ಅನಿಲ್ ಅಂಬಾನಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಯೆಸ್ ಬ್ಯಾಂಕ್ ಗೆ ಅನಿಲ್ ಅಂಬಾನಿ ಸಮೂಹ 2,892 ಕೋಟಿ ರೂಪಾಯಿ ಸಾಲ ಮರು ಪಾವತಿಸಬೇಕಿದ್ದು, ಸಕಾಲಕ್ಕೆ ಬಾರದ ಕಾರಣ ಯೆಸ್ ಬ್ಯಾಂಕ್, ಅನಿಲ್ ಅಂಬಾನಿ ಸಮೂಹದ ಮುಖ್ಯ ಕಚೇರಿಯನ್ನು ವಶಕ್ಕೆ ಪಡೆದುಕೊಂಡಿದೆ.

ಮುಂಬೈನ ಸಾಂತಕ್ರೂಜ್ ನಲ್ಲಿ ಈ ಕಚೇರಿಯಿದ್ದು, ಇಲ್ಲಿಂದಲೇ ಅನಿಲ್ ಅಂಬಾನಿಯವರ ಬಹುತೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಯೆಸ್ ಬ್ಯಾಂಕ್, ಅನಿಲ್ ಅಂಬಾನಿ ಸಮೂಹಕ್ಕೆ ಸೇರಿದ ದಕ್ಷಿಣ ಮುಂಬೈನ ಎರಡು ಫ್ಲಾಟ್ ಗಳನ್ನು ಸಹ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...