alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ 15 ರೂ.ಗೆ ನೀರಿನ ಬಾಟಲಿ ಮಾರಾಟ ಮಾಡಿ IRCTC ಗಳಿಸಿದೆ ಇಷ್ಟೊಂದು ಲಾಭ

ರೈಲು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಸುಲಭವಾದ ಮಾರ್ಗ ಅನುಸರಿಸುತ್ತಾರೆ. ಐಆರ್‌ಸಿಟಿಸಿಯ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಸುಲಭವಾಗಿ ಟಿಕೆಟ್ ಬುಕ್ ಮಾಡ್ತಾರೆ. ಇದಕ್ಕಾಗಿ ಐಆರ್‌ಸಿಟಿಸಿ ಕೆಲವು ಶುಲ್ಕವನ್ನು ವಿಧಿಸುತ್ತದೆ. ಆದರೆ ಐಆರ್‌ಸಿಟಿಸಿಯ ಆದಾಯವು ಅಕ್ಟೋಬರ್ -ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ.

ಇಂಟರ್ನೆಟ್ ಟಿಕೆಟ್ ಬುಕಿಂಗ್ ಮೂಲಕ ಮೂರು ಪಟ್ಟು ಅಂದ್ರೆ 227 ಕೋಟಿ ರೂಪಾಯಿಗೆ ಏರಿದೆ. ಐಆರ್‌ಸಿಟಿಸಿ ರೈಲ್ ನೀರ್ ಎಂಬ 15 ರೂಪಾಯಿ ನೀರಿನ ಬಾಟಲಿಯನ್ನು ಮಾರಾಟ ಮಾಡುವ ಮೂಲಕ ಒಟ್ಟು 58.6 ಕೋಟಿ ರೂಪಾಯಿ ಗಳಿಸಿದೆ. ಇದ್ರಲ್ಲೂ ಶೇಕಡಾ 42 ರಷ್ಟು ಹೆಚ್ಚಳ ಕಂಡು ಬಂದಿದೆ.

ಐಆರ್‌ಸಿಟಿಸಿನ ತ್ರೈಮಾಸಿಕ ವರದಿ ಪ್ರಕಾರ, ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಂಪನಿಯ ಆದಾಯ 435 ಕೋಟಿ ರೂಪಾಯಿಗಳಿಂದ 716 ಕೋಟಿ ರೂಪಾಯಿಗೆ ಏರಿದೆ.  ಲಾಭವು 73.6 ಕೋಟಿಯಿಂದ 206 ಕೋಟಿ ರೂಪಾಯಿಗೆ ಏರಿದೆ. ಅಂದರೆ ಲಾಭದಲ್ಲಿ ಶೇಕಡಾ 180 ರಷ್ಟು ಏರಿಕೆ ಕಂಡು ಬಂದಿದೆ. ಕಂಪನಿಯು ತನ್ನ ಹೂಡಿಕೆದಾರರನ್ನು ಮೆಚ್ಚಿಸಲು ಪ್ರತಿ ಷೇರಿಗೆ 10 ರೂ.ಗಳ ಲಾಭಾಂಶವನ್ನು ಘೋಷಿಸಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...