BIG NEWS : ‘ಭೂ ಒಡೆತನ’ ಯೋಜನೆಯಡಿ ರಾಜ್ಯದ SC/ST ಕೃಷಿ ಕಾರ್ಮಿಕರಿಗೆ ಭೂಮಿ ವಿತರಣೆ’ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂ ಖರೀದಿಸಿ ಕೃಷಿ ಜಮೀನು ಒದಗಿಸುವ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ.

ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತಗಳಿಂದ ಅನುಷ್ಠಾನಗೊಳಿಸುತ್ತಿರುವ ಭೂ ಒಡೆತನ ಯೋಜನೆಗೆ ಸಂಬಂಧಿಸಿದಂತೆ, ಸರ್ಕಾರದ ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ ಇಲಾಖೆ) ವಿವಿಧ ತರಹದ ಜಮೀನುಗಳಿಗೆ ಮಾರ್ಗಸೂಚಿ ಬೆಲೆಯನ್ನು ನಿರ್ಧರಿಸಿ ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಗಳನ್ನು ಅನುಸರಿಸಿ ಪ್ರತಿ ಎಕರೆಗೆ ಮಾರ್ಗಸೂಚಿ ದರ (guidance value) ದಂತೆ ಭೂ ಒಡೆತನ ಯೋಜನೆಯಡಿಯಲ್ಲಿ ಖರೀದಿಸಲು ಅನುಮೋದನೆ ನೀಡಿ ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಆದೇಶಿಸಿದೆ.

ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತಗಳಿಂದ ಅನುಷ್ಠಾನಗೊಳಿಸುತ್ತಿರುವ ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಭೂರಹಿತ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿ ಮಾಡಿ ವಿತರಿಸಲು ಜಾರಿಯಲ್ಲಿರುವ ಘಟಕ ವೆಚ್ಚ ರೂ.10.00 ರಿಂದ 15.00 ಲಕ್ಷಗಳವರೆಗೆ ಹೆಚ್ಚಿಸಿ ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಆದೇಶಿಸಿದೆ.

ಸದರಿ ಯೋಜನೆಯಡಿ ಫಲಾಪೇಕ್ಷಿಗಳಿಗೆ ಭೂಮಿ ಒದಗಿಸುವ ಸಂಬಂಧ ಪಡೆಯಬೇಕಾದ ವಿವಿಧ ದಾಖಲೆಗಳನ್ನು ಕ್ರೋಡೀಕರಿಸುವುದರಲ್ಲಿ ವಿಳಂಬವಾಗುತ್ತಿದ್ದು ಇದರಿಂದಾಗಿ ಫಲಾಪೇಕ್ಷಿಗಳಿಗೆ ತ್ವರಿತವಾಗಿ ಯೋಜನೆಯ ಸೌಲಭ್ಯಗಳನ್ನು ನೀಡಲು ಸಾದ್ಯವಾಗದ ಕಾರಣ, ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಸೂಕ್ತ ಆದೇಶ ಹೊರಡಿಸುವಂತೆ ವ್ಯವಸ್ಥಾಪಕ ನಿರ್ದೇಶಕರು, ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿ ಕೋರಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಕಇ 399 ಎಸ್ ಡಿಸಿ 2019, ಬೆಂಗಳೂರು, 2:11.06.2020

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಬರುವ ವಿವಿಧ ನಿಗಮ/ಅಲೆಮಾರಿ ಕೋಶಗಳ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂ ಒಡೆತನ ಯೋಜನೆಯಡಿ ಭೂಮಿಯನ್ನು ಒದಗಿಸುವ ಸಂಬಂಧ ಪಡೆಯಬೇಕಾದ ವಿವಿಧ ದಾಖಲೆಗಳನ್ನು ಹಾಗೂ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಈ ಕೆಳಕಂಡ ಮಾರ್ಗಸೂಚಿ / ನಿಬಂಧನೆಗಳನ್ನು ಅನುಸರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶಿಸಿದೆ.
ಮಾರ್ಗಸೂಚಿ / ನಿಬಂಧನೆಗಳು

  1. ಜಿಲ್ಲಾ ವ್ಯವಸ್ಥಾಪಕರು ಪರಿಶಿಷ್ಟ ಜಾತಿ / ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಂದ ಏಪ್ರಿಲ್ ಮಾಹೆಯಲ್ಲಿ ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಿ, ಅರ್ಜಿಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸುವುದು.
  2. ಜಮೀನು ಮಾರಾಟ ಮಾಡಲು ಇಚ್ಚಿಸಿರುವ ಭೂ ಮಾಲೀಕರಿಂದಲೂ ಸಹ ಏಪ್ರಿಲ್ ಮಾಹೆಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಲು ಪತ್ರಿಕಾ ಪ್ರಕಟಣೆ ಮೂಲಕ ವ್ಯಾಪಕ : ಪ್ರಚಾರ ನೀಡುವುದು.
  3. ಭೂ ಲಭ್ಯತೆ ಮತ್ತು ಬೇಡಿಕೆಗೆ ಅನುಗುಣವಾಗಿ ವರ್ಷದ ಪ್ರಾರಂಭದಲ್ಲಿ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವ್ಯವಸ್ಥಾಪಕರ ಜಂಟಿ ಖಾತೆಗೆ ಅನುದಾನ ಬಿಡುಗಡೆ ಮಾಡುವುದು.
  4. ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು (ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಮತ್ತು ಈ ಕೆಳಕಂಡ ದಾಖಲಾತಿಗಳನ್ನು ಲಗತ್ತಿಸಿ ನಿಗಮದ ಜಿಲ್ಲಾ ಕಛೇರಿಯಲ್ಲಿ/ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸುವುದು.)
    ಅ) ಜಾತಿ ಪ್ರಮಾಣ ಪತ್ರ (ತಹಸೀಲ್ದಾರರಿಂದ)
    ಆ) ಆದಾಯ ಪ್ರಮಾಣ ಪತ್ರ (ತಹಸೀಲ್ದಾರರಿಂದ)
    ಇ) ಭೂ ರಹಿತ ಕೃಷಿ ಕಾರ್ಮಿಕರ ಪತ್ರ (ತಹಸೀಲ್ದಾರರಿಂದ)
    ಈ) ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್ (ಪಡಿತರ ಚೀಟಿ)
  5. ಭೂ ಮಾಲೀಕರು ನಮೂನೆ-1 ರ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು.
  6. ಜಾತಿ ಪ್ರಮಾಣ ಪತ್ರ
  7. ಭೂ ಮಾರಾಟ ಮಾಡಲು ಮುಚ್ಚಳಿಕೆ ಪತ್ರ (ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು.
  8. ಭೂ ಮಾಲೀಕರ ವಂಶಾವಳಿ (ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿಕೊಂಡು ಸಲ್ಲಿಸತಕ್ಕದ್ದು.)
  9. ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ (NOC) (ಛಾಪಾ ಕಾಗದದಲ್ಲಿ ವಂಶಾವಳಿಯಲ್ಲಿರುವ ಸದಸ್ಯರು ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು.
  10. ಇತ್ತೀಚಿನ ಪಹಣಿ ಪತ್ರಿಕೆ ಮತ್ತು ಹಕ್ಕು ಬದಲಾವಣೆ ಪ್ರತಿ. (ಮ್ಯೂಟೇಷನ್ ಪ್ರತಿ)
  11. ಕಳೆದ 13 ವರ್ಷಗಳ ಇ.ಸಿ. (ಋಣಭಾರ ರಾಹಿತ್ಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.)
    ಜಿಲ್ಲಾ ವ್ಯವಸ್ಥಾಪಕರು ಕೈಗೊಳ್ಳಬೇಕಾದ ಕ್ರಮಗಳು.
  12. ಅರ್ಜಿದಾರರಿಂದ ಸ್ವೀಕೃತವಾಗುವ ಅರ್ಜಿಗಳು ಮತ್ತು ಭೂ ಲಭ್ಯತೆಗನುಗುಣವಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವುದು.
  13. ಅರ್ಜಿ ಬಂದ ತಕ್ಷಣ ಜಿಲ್ಲಾ ಕಛೇರಿಯಿಂದ ಭೂ ಮಾಲೀಕರಿಗೆ ಕ್ರಮ ಸಂಖ್ಯೆ: 5 ರಲ್ಲಿ ನಮೂದಿಸಿದ ದಾಖಲಾತಿಗಳನ್ನು ಸಲ್ಲಿಸಲು ಲಿಖಿತವಾಗಿ ತಿಳಿಸುವುದು ಮತ್ತು 45 ದಿವಸಗಳಲ್ಲಿ ದಾಖಲಾತಿಗಳನ್ನು ಸಲ್ಲಿಸದೇ ಇದ್ದಲ್ಲಿ ಸೂಕ್ತ ಹಿಂಬರಹದೊಂದಿಗೆ ಪ್ರಕರಣವನ್ನು ಮುಕ್ತಾಯಗೊಳಿಸುವುದು.
  14. ಫಲಾಪೇಕ್ಷಿಯು ಕ್ರಮ ಸಂಖ್ಯೆ (4) ರಲ್ಲಿ ನಮೂದಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸದೇ ಇದ್ದಲ್ಲಿ ಅಂತಹ ಅರ್ಜಿಯನ್ನು ಸೂಕ್ತ ತಿಳುವಳಿಕೆಯ ಹಿಂಬರಹದೊಂದಿಗೆ ಹಿಂದಿರುಗಿಸುವುದು.
  15. ಅರ್ಜಿದಾರರು (ಫಲಾಪೇಕ್ಷಿ) ಮತ್ತು ಅವರ ಕುಟುಂಬದ ಸದಸ್ಯರು ಕಳೆದ 05 ವರ್ಷಗಳಲ್ಲಿ ರೂ.1.00 ಲಕ್ಷಕ್ಕಿಂತ ಮೇಲ್ಪಟ್ಟು ನಿಗಮದಿಂದ ಸಾಲ / ಸಹಾಯಧನ ಪಡೆದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸತಕ್ಕದ್ದಲ್ಲ.
  16. ಫಲಾಪೇಕ್ಷಿಗಳು ಭೂಮಿಯನ್ನು ಕೋರಿ ಅರ್ಜಿಗಳನ್ನು ಸಲ್ಲಿಸಲು ಮತ್ತು ಜಮೀನು ಮಾರಾಟ ಮಾಡಲು ಭೂ ಮಾಲೀಕರು ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಸಭೆಯ ಅನುಮೋದನೆ ಅಗತ್ಯವಿರುವುದಿಲ್ಲ.
  17. ಅರ್ಜಿದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲನೆ ಮಾಡಿ ನಮೂನೆ-2 ರಲ್ಲಿ ವರದಿ ನೀಡುವಂತೆ ತಹಶೀಲ್ದಾರರನ್ನು ಕೋರುವುದು.
  18. ತಹಶೀಲ್ದಾರರು ಜಿಲ್ಲಾ ವ್ಯವಸ್ಥಾಪಕರು/ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ನಮೂನೆ-2 ರಲ್ಲಿ 15 ದಿನಗಳೊಳಗಾಗಿ ವರದಿಯನ್ನು ನೀಡುವುದು.
  19. ಜಿಲ್ಲಾ ವ್ಯವಸ್ಥಾಪಕರು ಮತ್ತು ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಅರ್ಜಿ ಸ್ವೀಕರಿಸಿದ 30 ದಿನಗಳೊಳಗಾಗಿ ಸ್ಥಳ ಪರಿಶೀಲನೆ ಮಾಡತಕ್ಕದ್ದು,
  20. ಸ್ಥಳ ಪರಿಶೀಲನಾ ವರದಿಯನ್ನು ನಮೂನೆ-3 ರಲ್ಲಿ ನಮೂದಿಸತಕ್ಕದ್ದು ಮತ್ತು ಸ್ಥಳ ಪರಿಶೀಲನಾ ಸಮಯದಲ್ಲಿ ಭೂ ಮಾಲೀಕರು ಮತ್ತು ಫಲಾನುಭವಿಗಳು ಇರುವ ಅಕ್ಷಾಂಶ ಮತ್ತು ರೇಖಾಂಶ ಸಹಿತ ಛಾಯಾ ಚಿತ್ರ ಹಾಗೂ ವಿಡಿಯೋವನ್ನು ಮಾಡತಕ್ಕದ್ದು.
  21. ಜಿಲ್ಲಾ ವ್ಯವಸ್ಥಾಪಕರು, ಕಂದಾಯ ಇಲಾಖೆಯಿಂದ ಪ್ರಕಟಿಸಿರುವ ಮಾರ್ಗಸೂಚಿ (kar.igr.nic) (https://www.karnataka.gov.in/karigr/Pages/Home.aspx) ಜಾಲತಾಣ (website) ನಲ್ಲಿ ಪಡೆದು, ಸ್ಥಳ ಪರಿಶೀಲನಾ ವರದಿ ಮತ್ತು ಇತರೆ ದಾಖಲಾತಿಗಳ ಸಹಿತ ಪ್ರಸ್ತಾವನೆಯನ್ನು ಚೆಕ್ ಲಿಸ್ಟ್ ನೊಂದಿಗೆ 30 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು.
  22. ಜಿಲ್ಲಾ ವ್ಯವಸ್ಥಾಪಕರು, ಭೂ ಮಾಲೀಕರು ಅರ್ಜಿಯೊಂದಿಗೆ ಸಲ್ಲಿಸಿದ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸ್ವೀಕರಿಸಿದ ದಿನಾಂಕವನ್ನು ಜೇಷ್ಠತೆ ಎಂದು ಪರಿಗಣಿಸಿ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು.
  23. ಜಿಲ್ಲಾಧಿಕಾರಿ ಕಛೇರಿಗೆ ಪ್ರಸ್ತಾವನೆ ಸಲ್ಲಿಸುವ ಮುನ್ನಾ ಎಲ್ಲಾ ದಾಖಲೆಗಳನ್ನು ಮೂಲ ಪ್ರತಿಗಳೊಂದಿಗೆ ತಾಳೆಮಾಡಿ ದೃಢೀಕರಿಸಿಕೊಳ್ಳತಕ್ಕದ್ದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read