ಮಕ್ಕಳನ್ನು ಮುದ್ದಿಸುವುದರ ಜೊತೆಗೆ ಹೇಳಿಕೊಡಿ ಶಿಸ್ತಿನ ಪಾಠ

ಕೆಲವರು ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಏನೇ ಮಾಡಿದ್ರೂ ಅವರ ಪರವಾಗಿ ನಿಂತು ಬಿಡುತ್ತಾರೆ. ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗಲೂ ಅದನ್ನು ಬೆಂಬಲಿಸಿ ಮಾತನಾಡುತ್ತಾರೆ.

ಇದರಿಂದ ಆ ಮಕ್ಕಳಿಗೆ ತಾವು ಏನೇ ಮಾಡಿದರೂ ಪೋಷಕರು ಬೆಂಬಲಿಸುತ್ತಾರೆ ಎಂದು ಗೊತ್ತಾಗಿಬಿಡುತ್ತದೆ. ಇಂತಹ ಮಕ್ಕಳು ನಿಧಾನಕ್ಕೆ ದಾರಿ ತಪ್ಪುತ್ತಾರೆ. ಹೇಳಿದ ಮಾತು ಕೇಳದವರಾಗುತ್ತಾರೆ.

ಮಕ್ಕಳನ್ನು ಎಷ್ಟು ಮುದ್ದಿಸುತ್ತೇವೆಯೋ ಅಷ್ಟೇ ಶಿಸ್ತಿನಲ್ಲಿಟ್ಟುಕೊಂಡರೆ ಅವರ ಮುಂದಿನ ಜೀವನಕ್ಕೆ ಒಳ್ಳೆಯದು. ಆದಷ್ಟೂ ಅವರನ್ನು ಸ್ವಾವಲಂಬಿಗಳನ್ನಾಗಿ ಬೆಳೆಸಲು ಪ್ರಯತ್ನಿಸಿ. ಇದರಿಂದ ಅವರು ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ.

ಇನ್ನು ಅವರು ತಪ್ಪು ಮಾಡಿದಾಗ ಅದು ತಪ್ಪು ಎಂದು ಹೇಳಿಬಿಡಿ. ಆಗ ಮುದ್ದಿಗಿಂತ ಶಿಕ್ಷೆಯೇ ಒಳ್ಳೆಯದು. ಇದರಿಂದ ಮಕ್ಕಳಿಗೆ ಸರಿ – ತಪ್ಪಿನ ಅರಿವಾಗುತ್ತದೆ.

ಸಾಧ್ಯವಾದಷ್ಟು ತಮ್ಮಲ್ಲಿರುವ ವಸ್ತುಗಳಿಂದ ಖುಷಿಯಾಗಿರುವುದಕ್ಕೆ ಹೇಳಿಕೊಡಿ. ಯಾವ ಪರಿಸ್ಥಿತಿ ಬಂದರೂ ಹೊಂದಿಕೊಳ್ಳುವಂತಹ ಗುಣವನ್ನು ಅವರಲ್ಲಿ ಬೆಳೆಸಿ. ಇದು ಅವರ ಜೀವನಕ್ಕೆ ಒಳ್ಳೆಯದು.

ನಿಮ್ಮ ಕಷ್ಟವನ್ನು ಅವರೊಂದಿಗೆ ಹಂಚಿಕೊಳ್ಳಿ. ಆಗ ಮಕ್ಕಳಿಗೆ ದುಡ್ಡಿನ ಬೆಲೆ, ಶ್ರಮದ ಬೆಲೆ ಗೊತ್ತಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read