ಹುಬ್ಬಳ್ಳಿ: ವಾರದ ಹಿಂದೆ ಹುಬ್ಬಳ್ಳಿಯಲಿ ಇಡಿ ಅಧಿಕಾರಿಗಳೆಂದು ಹೇಳಿ ವಿಚಾರಣೆ ಹೆಸರಲ್ಲಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದ ಕಳ್ಳರನ್ನು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಬಂಧಿಸಲಾಗಿದೆ.
ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ಚಿನ್ನದ ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಬೆಳಗಾವಿಯತ್ತ ಕರೆದೊಯ್ದು, ವಿಚಾರಣೆ ಹೆಸರಲ್ಲಿ ಚಿನ್ನ, ಹಣ ತರಿಸಿ ಆತನಿಂದ 2.942 ಕೆಜಿ ಚಿನ್ನ 2 ಲಕ್ಷ ಹಣ ಸೇರಿದಂತೆ ಬರೋಬ್ಬರಿ ಮೂರು ಕೋಟಿ ಮೌಲ್ಯದ ಚಿನ್ನಾಭರಣ, ಹಣ ದೋಚಿ ಐವರು ಪರಾರಿಯಾಗಿದ್ದರು.
ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿ ಸಿಸಿಬಿ ಪೊಲೀಸರು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಂಕುಶ್ ಕದಂ, ಚಂದ್ರಶೇಖರ್, ಜಿಗ್ನೇಶ್ ಕುಮಾರ್, ವಿಲಾಸ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 56.26 ಗ್ರಾಂ ಚಿನ್ನ, 60 ಸಾವಿರ ನಗದು 7 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿ ಹಾಗೂ ಚಿನ್ನಾಭರಣಕ್ಕಾಗಿ ತನಿಖೆ ಮುಂದುವರೆದಿದೆ.
