ಕಾರ್ಮಿಕ ಇಲಾಖೆಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ಸುರಕ್ಷತಾ ಕಿಟ್‌ಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅಂತಿಮ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಕೊಪ್ಪಳ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ವತಿಯಿಂದ ಕಾರ್ಮಿಕ ಇಲಾಖೆಯ ಕೊಪ್ಪಳ ಕಛೇರಿಗಳಿಗೆ ವಿವಿಧ ಸುರಕ್ಷತಾ ಕಿಟ್‌ಗಳಾದ ಮೇಸನ್, ಎಲೆಕ್ಟ್ರಿಷಿಯನ್, ವೆಲ್ಡರ್, ಕಾರ್ಪೆಂಟರ್, ಪೇಂಟರ್ ಹಾಗೂ ಪ್ಲಂಬರ್ ಕಿಟ್‌ಗಳು ಸ್ವೀಕೃತವಾಗಿದ್ದು, ಈ ವಿವಿಧ ಸುರಕ್ಷತಾ ಕಿಟ್‌ಗಳನ್ನು ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿತರಿಸಲು ಅರ್ಹ ಕಾರ್ಮಿಕರಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು.
ಕೊಪ್ಪಳ ಜಿಲ್ಲೆಯ ವಿವಿಧ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಟ್ಟಡಕಾರ್ಮಿಕರು, ಈ ಕಿಟ್‌ಗಳಿಗಾಗಿ ಅರ್ಜಿ ಸಲ್ಲಿಸಲು ಇನ್ನಷ್ಟು ಸಮಯ ಕಾಲಾವಕಾಶ ಕೋರಿದ್ದರಿಂದ ಡಿಸೆಂಬರ್ 2 ರಿಂದ ಡಿ. 6ರ ವರೆಗೆ ಕಾರ್ಮಿಕ ನಿರೀಕ್ಷಕರ ಕಛೇರಿ ಕೊಪ್ಪಳ ವೃತ್ತ (ಜಿಲ್ಲಾಡಳಿತ ಭವನ ಕೊಪ್ಪಳ), ಕಾರ್ಮಿಕ ನಿರೀಕ್ಷಕರ ಕಛೇರಿ ಕುಷ್ಟಗಿ ವೃತ್ತ (ಬುತ್ತಿ ಬಸವೇಶ್ವವರ ನಗರ ಕುಷ್ಟಗಿ), ಕಾರ್ಮಿಕ ನಿರೀಕ್ಷಕರ ಕಛೇರಿ ಗಂಗಾವತಿ ವೃತ್ತ (ಹೊಸಳ್ಳಿ ರಸ್ತೆ ಎಲ್‌ಐಸಿ ಕಛೇರಿ ಹತ್ತಿರ ಗಂಗಾವತಿ) ಕಛೇರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಕೊಪ್ಪಳ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
