ಬೆಂಗಳೂರು : 2022-23ನೇ ಸಾಲಿನ “ನಮ್ಮ ಹೊಲ ನಮ್ಮ ದಾರಿ” ಯೋಜನೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ ಅನುಷ್ಠಾನಗೊಳಿಸುವ ಕುರಿತು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ/597/ವೆಚ್ಚ-6/2022 ದಿನಾಂಕ:20.08.2022
ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ನರೇಗಾ ಯೋಜನೆಯಡಿ ಈ ಹಿಂದೆ ಗ್ರಾಮೀಣ ಸರ್ವಋತು ಸಂಪರ್ಕ ರಸ್ತೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸದರಿ ಯೋಜನೆಯಡಿ ರಸ್ತೆಗಳನ್ನು ಕೊನೆಯ ಆದ್ಯತೆಯಾಗಿ ಪರಿಗಣಿಸಿ ಶೇ10ರ ಮಿತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿತ್ತು.
ರಾಜ್ಯಾದ್ಯಂತ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸಲು ವ್ಯಾಪಕವಾಗಿ ಕ್ರಮ ಕೈಗೊಳ್ಳಲು ಸಾಧವಾಗದ ಕಾರಣ, ಹಾಗೂ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುವಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅತಗತವಾಗಿರವುದನ್ನು ಮನಗಂಡು ಸನ್ಮಾನ ಮುಖ್ಯಮಂತ್ರಿಗಳು 2022-23ನೇ ಆಯವ್ಯಯ ಭಾಷಣದಲ್ಲಿ ಓದಲಾದ 1 ಕಿ ಆಯವ್ಯಯದ ಕಂಡಿಕೆ ಸಂ:211 ರಲ್ಲಿ “2021-22ನೇ ಸಾಲಿಗೆ ಮಹಾತ್ಮ ಗಾಂಧಿ ಗ್ರಾಮೇಣ ಉದ್ಯೋಗ ಖಾತ್ರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಜಿಸುವ ಗುರಿಗೆದುರಾಗಿ 14.05 ಕೋಟೆ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಯೋಜನೆಯಡಿಯಲ್ಲಿ ರೈತರು ತಮ್ಮ ಹೊಲಕ್ಕೆ ಹೋಗುವ ರಸ್ತೆಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು” ಎಂದು ಘೋಷಣೆ ಮಾಡಿರುತ್ತಾರೆ.
ಆದ್ದರಿಂದ, 2022-23 ನೇ ಸಾಲಿನ ನರೇಗಾ ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳಂತೆ ರೈತರ ಹೊಲ/ಗೆದ್ದೆ/ತೋಟ/ಜಮೀನುಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವ ಕಾಮಗಾರಿಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಿ, ಯೋಜನೆಯ ಒಟ್ಟು ಕಾರ್ಮಿಕ ಆಯವ್ಯಯದ ಶೇ 25 ರ ಮಿತಿಯಲ್ಲಿ ಅನುಷ್ಠಾನಗೊಳಿಸಲು ಓದಲಾದ-2 ರಲ್ಲಿ ಆದೇಶಿಸಲಾಗಿದೆ.
ಮೇಲಿನ ಹಿನ್ನೆಲೆಯಲ್ಲಿ, ರಾಜ್ಯದ 189 ಗ್ರಾಮೀಣ ವಿ.ಸ.ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ನಂತೆ ರೈತರ ಹೊಲಗಳಿಗೆ ಹೋಗುವ ದಾರಿಗಳನ್ನು ನಿರ್ಮಾಣ ಮಾಡಲು “ನಮ್ಮ ಹೊಲ ನಮ್ಮ ದಾರಿ” ಎಂಬ ಯೋಜನೆಯನ್ನು ರೂಪಿಸಿ, ಸದರಿ ಯೋಜನೆಗೆ ರಾಜ್ಯ ಸರ್ಕಾರದ ಲೆಕ್ಕ ಶೀ. 3054 ರಡಿ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆಯೊಂದಿಗೆ ಅನುದಾನವನ್ನು ಬಳಸಿಕೊಂಡು ಅನುಷ್ಟಾನಗೊಳಿಸಲು ಸರ್ಕಾರವು ತೀರ್ಮಾನಿಸಿದೆ.
ಮುಂದುವರೆದು, ಓದಲಾದ 3ರಲ್ಲಿ ರಾಜ್ಯದ 189 ಗ್ರಾಮೀಣ ವಿ.ಸ.ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 30 ಕಿ.ಮೀ ನಂತೆ, ಪ್ರತಿ ಕಿ.ಮೀಗೆ 12.50 ಲಕ್ಷದಂತೆ ನಿಗಧಿಪಡಿಸಿ, ಅದರಂತೆ, ಒಟ್ಟಾರೆ 5670.00 ಕಿಮೀ ರಸ್ತೆಯನ್ನು ಅಭಿವೃದ್ಧಿಪಡೆಸಲು ರೂ.708.75 ಕೋಟಿಗಳಲ್ಲಿ, MGNREGA ಯೋಜನೆಯಿಂದ ಪ್ರತಿ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ರೂ.9.00 ಲಕ್ಷದಂತೆ ಒಟ್ಟು ರೂ.510.30 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ಲೆಕ್ಕ ಶೀ 3054 ರಸ್ತೆ ಪ್ರತಿ ಕಿ.ಮೀ ರಸ್ತೆಯನ್ನು ಅಭಿವೃದಿಪಡಿಸಲು ರೂ.3.50 ಲಕ್ಷದಂತೆ ಒಟ್ಟು 198.45 ಕೋಟಿಗಳನ್ನು ಭರಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.
ಅದರಂತೆ ಮೇಲ್ಕಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಈ ಮಾರ್ಗಸೂಚಿಗಳು.
ಯೋಜನೆಯ ಆಶಯಗಳು:
1. ರೈತರ ಹೊಲ/ಗದ್ದೆ/ತೋಟ/ಜಮೀನುಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವುದು.
2. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಅನುಕೂಲ ಮಾಡುವುದು.
ರೈತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವೆಚ್ಚ ತಗ್ಗಿಸುವುದು.
4. ಸಾರ್ವಜನಿಕರು ಹಾಗೂ ರೈತರು ಸುರಕ್ಷಿತವಾಗಿ, ಸುಗಮವಾಗಿ ಸಂಚರಿಸುವುದು.
5. ಗ್ರಾಮೀಣ ಜನತೆಗೆ ಉದ್ಯೋಗವಕಾಶವನ್ನು ಕಲ್ಪಿಸುವುದು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು,
6. ಗ್ರಾಮೀಣ ಜನತೆಯ ಜೀವನಮಟ್ಟ ಸುಧಾರಿಸಲು ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ಕಡಿವಾಣ ಹಾಕುವುದು.
ರಸ್ತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ವಿಧಾನ
1. ಸರ್ಕಾರವು ನಿಗದಿಪಡಿಸಿದ ಮಿತಿಗೆ ಅನುಗುಣವಾಗಿ ರಸ್ತೆ ಕಾಮಗಾರಿಗಳನ್ನು ಆಯ್ಕೆ ಮಾಡುವುದು.
. ಅತೀ ಹೆಚ್ಚು ಬಳಕೆಯಾಗುವ ಮತ್ತು ಹೆಚ್ಚಿನ ರೈತರು ಅವಲಂಬಿತವಾದ ರಸ್ತೆಗಳನ್ನು ಮಾತ್ರ ಆಯ್ಕೆ ಮಾಡುವುದು.
2 3. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಾಲ್ಲೂಕು ಕಾರ್ಯಕ್ರಮ ಅಧಿಕಾರಿಯಾದ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ತಮ್ಮ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ತಮ್ಮ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯವಾಗಿ ಕೈಗೆತ್ತಿಕೊಳ್ಳಬೇಕಾದ ರಸ್ತೆ ಕಾಮಗಾರಿಗಳನ್ನು ಆಯ್ಕೆ ಮಾಡುವುದು.
4. ರಸ್ತೆ ಕಾಮಗಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಮತ್ತು PRED ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವುದು.
5. ಆಯ್ಕೆಯಾದ ಕಾಮಗಾರಿಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಸದರಿ ಕಾಮಗಾರಿಗಳಿಗೆ 2022-23 ನೇ ಸಾಲಿಗೆ ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಿಕೊಂಡು ಅನುಷ್ಠಾನಗೊಳಿಸುವುದು.
6. ಕಾರ್ಯಕ್ರಮ ಅನುಷ್ಠಾನದ ಎಲ್ಲಾ ಹಂತಗಳಲ್ಲಿ ಜನರ ಸಹಭಾಗಿತ್ವವನ್ನು ಅವಶ್ಯಕವಾಗಿ ತೊಡಗಿಸಿಕೊಳ್ಳುವುದು.
ಮಾನದಂಡಗಳು ಹಾಗೂ ಕಾರ್ಯಕ್ರಮ ಅನುಷ್ಠಾನ:
1. ಕಂದಾಯ ಇಲಾಖೆಯು ಸರ್ವೇ ಮಾಡಿರುವ ಗ್ರಾಮ ನಕಾಶೆ ದಾಖಲೆಯಲ್ಲಿರುವ ಅಧಿಕೃತ (ಸಾರ್ವಜನಿಕ ರಸ್ತೆ/ಬಂಡಿದಾರಿ/ಕಾಲುದಾರಿ) ರಸ್ತೆಗಳನ್ನು ತಗೆದುಕೊಳ್ಳುವುದು.
2. ಒಂದು ವೇಳೆ ರಸ್ತೆ ಸಂಪರ್ಕಕ್ಕಾಗಿ ಖಾಸಗಿ ಸ್ವತ್ತಿನಲ್ಲಿ ಈ ಸಂಪರ್ಕವನ್ನು ಮಾಡಬೇಕಾದಲ್ಲಿ ನೊಂದಾಯಿತ ದಾನ (Registered Gift Deed) ಪತ್ರವನ್ನು ಭೂ ಮಾಲೀಕರಿಂದ ಗ್ರಾಮ ಪಂಚಾಯಿತಿಯ ಹೆಸರಿಗೆ ಉಪನೋಂದಾಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಮಾಡಿಕೊಳ್ಳುವುದು. ಹಾಗೂ ಇದಕ್ಕಾಗಿ ಭೂ ಮಾಲೀಕರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ.
3. ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಒಂದು ವೇಳೆ ಭೂಸ್ವಾಧೀನ ಪಡಿಸಿಕೊಳ್ಳಬೇಕಿದ್ದಲ್ಲಿ ಭೂಸ್ವಾಧೀನ ಪರಿಹಾರಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನ ಒದಗಿಸಲಾಗುವದಿಲ್ಲ ಹಾಗಾಗಿ ರೈತರ ಮನವೋಲಿಸಿ ರಸ್ತೆ ಅಭಿವೃದ್ಧಿಪಡಿಸುವುದು ಹಾಗೂ ಒಂದು ವೇಳೆ ರೈತರು ಒಪ್ಪದಿದ್ದಲ್ಲಿ ಅಂತಹ ರಸ್ತೆಯನ್ನು ಪರಿಗಣಿಸದೆ ಬೇರೆ ರಸ್ತೆಯನ್ನು ಆಯ್ಕೆ ಮಾಡುವುದು.
4. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸುವಾಗ ಕೂಲಿ ಮತ್ತು ಸಾಮಾಗ್ರಿಗಳ 60:40ರ ಅನುಪಾತವನ್ನು ಕಡ್ಡಾಯವಾಗಿ ಪಾಲನೆ ಮಾಡುವುದು. (ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ
5. ಕಾಮಗಾರಿಯ ಅನುಷ್ಟಾನವನ್ನು ಸಾಕಷ್ಟು ಕೂಲಿ ಬೇಡಿಕೆ ಇರುವುದನ್ನು ಖಚಿತಪಡಿಸಿಕೊಂಡು ಅನುಷ್ಠಾನಗೊಳಿಸುವುದು.
6. ಕಾಮಗಾರಿಯ ಅಕುಶಲ ಕೆಲಸವನ್ನು ಕೇವಲ ನೋಂದಾಯಿತ (ಉದ್ಯೋಗ ಚೀಟಿ ಹೊಂದಿದ) ಕೂಲಿಕಾರರಿಂದ ನಿರ್ವಹಿಸತಕ್ಕದ್ದು.
7. ನರೇಗಾ ಯೋಜನೆಯ ಮಾರ್ಗಸೂಚಿಗಳಂತೆ ಕಡ್ಡಾಯವಾಗಿ ಗ್ರಾಮ ಸಭಾ ಅನುಮೋದನೆಯಾದ ನಂತರ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಂಡು ಅನುಷ್ಠಾನಗೊಳಿಸುವುದು.
8. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾ ಪಂಚಾಯಿತಿಗಳಿಂದ ಆಡಳಿತಾತ್ಮಕ ಅನುಮೋದನೆ ನೀಡುವುದು.
9. ಅನುಮೋದಿತ ಕ್ರಿಯಾ ಯೋಜನೆಗಳನ್ವಯ ಗ್ರಾಮ ಪಂಚಾಯಿತಿ/ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ KTPP ನಿಯಾಮಾನುಸಾರ ಕಾಮಗಾರಿಯನ್ನು ಪೂರ್ಣಗೊಳಿಸುವುದು.
10. ಸರ್ಕಾರದಿಂದ ಲೆಕ್ಕ ಶೀರ್ಷಿಕೆ 3054 ರಡಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ವಾಸ್ತವಿಕ ಸ್ಥಿತಿಯ ಛಾಯಾಚಿತ್ರ ಕಾಮಗಾರಿ ಪ್ರಾರಂಭಗೊಂಡ ತರುವಾಯದೆ ಛಾಯಾಚಿತ್ರ ಮತ್ತು ಪೂರ್ಣಗೊಂಡ ಕಾಮಗಾರಿಯ ಛಾಯಾಚಿತ್ರವನ್ನು ಕಾಮಗಾರಿಗಳ ವಿವರದೊಂದಿಗೆ NGSK ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸುವುದು.
11. ಮಹತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಮೂರು ವಿಭಿನ್ನ ಹಂತಗಳಲ್ಲಿ ಜಿಯೋ-ಟ್ಯಾಗ್ ಮಾಡುವುದು ಅಂದರೆ ಕಾಮಗಾರಿ ನಡೆಯುವ ಮೊದಲು, ಕಾಮಗಾರಿ ನಡೆಯುವ ಸಮಯದಲ್ಲಿ ಮತ್ತು ಕಾಮಗಾರಿ ಪೂರ್ಣಗೊಳಿಸಿದ ನಂತರ ನಿರ್ವಹಿಸುವುದು.






