ಪಣಜಿ: ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ ಕ್ಲಬ್ ನಲ್ಲಿ ನಡೆದ ಬೆಂಕಿ ದುರಂತದಲ್ಲಿ ೨೫ ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಕುಟುಂಬದೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ನೈಟ್ ಕ್ಲಬ್ ನಲ್ಲಿ ಸಂಭವಿಸ್ದ ಬೆಂಕಿಗೆ ಆಹುತಿಯಾಗಿದ್ದಾರೆ.
ವಿನೋದ್ ಕುಮಾರ್ ಮೃತ ದುರ್ದೈವಿ. ವಿನೋದ್ ಕುಮಾರ್ ತನ್ನ ಕುಟುಂಬದೊಂದಿಗೆ ರಜೆಯನ್ನು ಕಳೆಯಲು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಗೋವಾದ ರೋಮಿಯೋ ಲೇನ್ ನೈಟ್ ಕ್ಲಬ್ ಗೆ ಕುಟುಂಬ ಸಮೇತ ಹೋಗಿದ್ದಾರೆ. ಬೆಂಕಿ ಅವಘಡ ಸಂಭವಿಸಿದಾದ ನೈಟ್ ಕ್ಲಬ್ ನಲ್ಲಿ ವಿನೋದ್ ಕುಟುಂಬವಿತ್ತು. ಬೆಂಕಿ ವ್ಯಾಪಿಸುತ್ತಿದ್ದಂತೆ ವಿನೋದ್ ಕುಮಾರ್ ಮೊದಲು ತನ್ನ ಪತ್ನಿ ಭಾವನಾರನ್ನು ರಕ್ಷಿಸಿ ಮುಖ್ಯದ್ವಾರದ ಮೂಲಕ ಹೊರ ತಳ್ಳಿ ರಕ್ಷಿಸಿದ್ದಾರೆ. ಮೂವರು ನಾದಿನಿಯರಾದ ಅನಿತಾ, ಸರೋಜ್ ಹಾಗೂ ಕಮಲಾ ಬೆಂಕಿಯಲ್ಲಿ ಸಿಲುಕಿದ್ದರು ಅವರನ್ನು ಅವರನ್ನು ರಕ್ಷಿಸು ಹೋದ ವಿನೋದ್ ಕುಮಾರ್ ಕೂಡ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ತು ಹೋಗಿದ್ದಾರೆ.
ಪತಿ ಹಾಗೂ ಸಹೋದರಿಯರು ಸೇರಿ ನಾಲ್ವರನ್ನು ಭಾವನಾ ಬೆಂಕಿ ದುರಂತದಲ್ಲಿ ಕಳೆದುಕೊಂಡಿದ್ದಾರೆ. ಹೋಟೆಲ್ ಸಿಬ್ಬಂದಿ ಮೂಲಕ ಪತಿಯನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಅಷ್ಟರಲ್ಲಿ ನಾಲ್ವರು ಬೆಂಕಿಯಲ್ಲಿ ಬೆಂದುಹೋಗಿದ್ದರು ಎಂದು ತಿಳಿದುಬಂದಿದೆ. ಇನ್ನು ಭಾವನಾ ಕೂಡ ಬೆಂಕಿಯಲ್ಲಿ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
