ಪಣಜಿ: ಗೋವಾ ನೈಟ್ ಕ್ಲಬ್ ಅಗ್ನಿ ದುರಂತದಲ್ಲಿ 25 ಜನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೂತ್ರಾ ಸಹೋದರರ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.
ಉತ್ತರ ಗೋವಾದ ಆರ್ಪೋರಾದ ರೋಮಿಯೋ ಲೇನ್ ಕ್ಲಬ್ ನ ಮಾಲೀಕರಾಗಿರುವ ಲೂತ್ರಾ ಸಹೋದರರಾದ ಮಾಲೀಕರಾದ ಗೌರವ್ ಮತ್ತು ಸೌರಭ್ ಲೂತ್ರಾ ದೇಶದಿಂದ ಫುಕೆಟ್‌ಗೆ ಹಾರಿದ ಕೆಲವೇ ಗಂಟೆಗಳ ನಂತರ, ಗೋವಾ ಪೊಲೀಸರು ಮಂಗಳವಾರ ಇಂಟರ್‌ಪೋಲ್ ಇಬ್ಬರೂ ಸಹೋದರರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಎಂದು ದೃಢಪಡಿಸಿದ್ದಾರೆ.
ಇದಲ್ಲದೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ವಾಗೇಟರ್‌ನಲ್ಲಿರುವ ರೋಮಿಯೋ ಲೇನ್ ಬೀಚ್ ಶ್ಯಾಕ್ ಅನ್ನು ಧ್ವಂಸಗೊಳಿಸಲು ಆದೇಶ ಹೊರಡಿಸಿದ್ದಾರೆ.
ತನಿಖೆಯಲ್ಲಿ ಇಲ್ಲಿಯವರೆಗೆ ಐದು ಜನರನ್ನು ಬಂಧಿಸಲಾಗಿದೆ. ಅವರೆಲ್ಲರೂ ವ್ಯವಸ್ಥಾಪಕರು. ಕ್ಲಬ್ ಮಾಲೀಕರು ಮತ್ತು ಪಾಲುದಾರರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್(ಎಲ್‌ಒಸಿ) ಮತ್ತು ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ ಎಂದು ಉತ್ತರ ಗೋವಾ ಪೊಲೀಸ್ ಡಿಐಜಿ ರಚನಾ ಶರ್ಮಾ ಹೇಳಿದ್ದಾರೆ,
ಸಿಬಿಐ ಮತ್ತು ಇಂಟರ್‌ಪೋಲ್ ಸಮನ್ವಯ ಸಾಧಿಸುತ್ತಿವೆ. ಇಬ್ಬರು ದೇಶದಿಂದ ಪಲಾಯನ ಮಾಡಿದ್ದಾರೆ; ನಾವು ಅವರನ್ನು ಮರಳಿ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
