alex Certify ಕೊರೊನಾ ಎಫೆಕ್ಟ್: ಅಮೂಲ್‌ ನಿಂದ ʼಅರಿಶಿನʼದ ‌ಐಸ್‌ ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎಫೆಕ್ಟ್: ಅಮೂಲ್‌ ನಿಂದ ʼಅರಿಶಿನʼದ ‌ಐಸ್‌ ಕ್ರೀಂ

ಕೊರೊನಾ ಕಾರಣದಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಹಿಂದೆಂದಿಗಿಂತಲೂ ಈಗ ಸಾಕಷ್ಟು ಆಸಕ್ತಿ ಬಂದಿದೆ. ಇದೇ ವಿಚಾರವಾಗಿ ಕೆಲಸ ಮಾಡಿರುವ ಅಮೂಲ್, ಇತ್ತೀಚೆಗೆ ತುಳಸಿ, ಅರಿಶಿನ, ಶುಂಠಿ ಸೇರಿದಂತೆ ರೋಗ ನಿರೋಧಕ ಶಕ್ತಿ ವರ್ಧಿಸುವ ಅಂಶಗಳಿರುವ ಐಸ್‌ ಕ್ರೀಂ ಒಂದನ್ನು ಬಿಡುಗಡೆ ಮಾಡಿದೆ.

ಹಾಲಿನ ಉತ್ಪನ್ನಗಳಲ್ಲಿ ಥರಾವರಿ ವೈವಿಧ್ಯತೆಗಳನ್ನು ಹೊಂದಿರುವ ಅಮೂಲ್ ಐಸ್‌ ಕ್ರೀಂ ಬ್ಯುಸಿನೆಸ್‌ನಲ್ಲೂ ದೊಡ್ಡ ಹೆಸರು. ಇದೀಗ ‘Haldi ice cream’ ಎಂಬ ಹೊಸ ಮಾದರಿಯನ್ನು ಅಮೂಲ್ ಮಾರುಕಟ್ಟೆಗೆ ಬಿಟ್ಟಿದೆ.

ಈ ಐಸ್‌ ಕ್ರೀಂನಲ್ಲಿ ಹಾಲು, ಜೇನುತುಪ್ಪ, ಮೆಣಸು, ಕರ್ಜೂರ, ಬಾದಾಮಿ ಹಾಗೂ ಗೋಡಂಬಿಗಳೂ ಇವೆ ಎಂದು ಅಮುಲ್ ತನ್ನ ಟ್ವಿಟರ್‌ ಹ್ಯಾಂಡಲ್ ಮೂಲಕ ತಿಳಿಸಿದೆ. ಇಷ್ಟು ಮಾತ್ರವಲ್ಲದೇ ತುಳಸಿ ಹಾಗೂ ಶುಂಠಿಗಳ ಫ್ಲೇವರ್‌ನಲ್ಲೂ ಐಸ್‌ ಕ್ರೀಂ ಬಿಡುಗಡೆ ಮಾಡಲು ಅಮುಲ್ ಸಿದ್ಧತೆ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...