alex Certify BIG NEWS: ಜೂ.1 ರಿಂದ ಈ ಕಂಪನಿ ಶುರು ಮಾಡಲಿದೆ ವಿಮಾನ ಹಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜೂ.1 ರಿಂದ ಈ ಕಂಪನಿ ಶುರು ಮಾಡಲಿದೆ ವಿಮಾನ ಹಾರಾಟ

goair to resume domestic operations from june 1 know how to book ...

ಸರ್ಕಾರದ ಸೂಚನೆಗಳು ಮತ್ತು ನಿಯಮಗಳನ್ನು ಅನುಸರಿಸಿ  ಗೋಏರ್ ಜೂನ್ 1 ರಿಂದ ತನ್ನ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸಲಿದೆ. ಮೇ 25 ರಿಂದ ದೇಶಾದ್ಯಂತ ಪ್ರಯಾಣಿಕರ ವಿಮಾನಯಾನ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಏರ್ ಇಂಡಿಯಾ ಸೇರಿದಂತೆ ಎಲ್ಲಾ ಇಂಡಿಯನ್ ಏರ್ಲೈನ್ಸ್ ಕಂಪನಿಗಳು ಶುಕ್ರವಾರದಿಂದ ಗೋ ಏರ್ ಹೊರತುಪಡಿಸಿ ದೇಶೀಯ ವಿಮಾನಗಳ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿವೆ. ಜೂನ್ 1 ರಿಂದ ಕಂಪನಿಯು ಟಿಕೆಟ್ ಕಾಯ್ದಿರಿಸುತ್ತಿದೆ ಎಂದು ಗೋಏರ್‌ಗೆ ಸಂಬಂಧಿಸಿದ ಮೂಲವೊಂದು ತಿಳಿಸಿದೆ. ಕಂಪನಿಯು ಪೈಲಟ್‌ಗಳ ಸಿಮ್ಯುಲೇಟರ್ ತರಬೇತಿ ಮತ್ತು ಕೆಲವು ಪರವಾನಗಿಗಳ ನವೀಕರಣದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎನ್ನಲಾಗ್ತಿದೆ.

ಕಂಪನಿಯ ಉದ್ಯೋಗಿಗಳನ್ನು ವೇತನವಿಲ್ಲದ ರಜೆಯ ಮೇಲೆ ಕಳುಹಿಸಿದೆ. ಪ್ರತಿದಿನ 100 ವಿಮಾನಗಳನ್ನು ಹಾರಿಸಲು ಕಂಪನಿ ಮುಂದಾಗಿದೆ.  ಕಂಪನಿಯು ಈಗಾಗಲೇ 85 ವಿಮಾನಗಳಿಗೆ ಅನುಮೋದನೆ ಹೊಂದಿದೆ. ಇನ್ನೂ 15 ವಿಮಾನಗಳಿಗಾಗಿ ಕಂಪನಿ ಅರ್ಜಿ ಸಲ್ಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...