alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಯಾನ ಕುರಿತ ಗೊಂದಲಗಳನ್ನು ಖುದ್ದಾಗಿ ಪರಿಹರಿಸಲಿದ್ದಾರೆ ಸಚಿವರು

ಕೊರೋನಾ ಲಾಕ್ ಡೌನ್ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದಲೂ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನ ಯಾನ ನಿಲುಗಡೆಯಾಗಿದೆ. ಇದೀಗ ಸಂಚಾರವನ್ನು ಪುನರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಈ ನಡುವೆ ಸಾರ್ವಜನಿಕರಿಗೆ ವಿಮಾನಯಾನ ಪ್ರಯಾಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ, ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಶ್ನೆಗಳು ಇವೆ.

ಹಾಗಿದ್ದಲ್ಲಿ ಪ್ರಯಾಣಿಕರು ನೇರವಾಗಿ ಕೇಂದ್ರ ವಿಮಾನಯಾನ ಸಚಿವರನ್ನು ಪ್ರಶ್ನಿಸಿ ಉತ್ತರ ಪಡೆದುಕೊಳ್ಳಬಹುದಾಗಿದೆ.

ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಹಾರಾಟದ ಬಗ್ಗೆ ನಿಮಗೆ ಪ್ರಶ್ನೆಯಿದ್ದರೆ ಶನಿವಾರ ಮಧ್ಯಾಹ್ನ ಒಂದರಿಂದ ಮೂರು ಗಂಟೆಯವರೆಗೆ ನನ್ನ ಫೇಸ್ಬುಕ್ ಲೈವ್ ಸೆಶನ್ ನಲ್ಲಿ ಉತ್ತರ ಪಡೆಯಿರಿ, #AskHardeepPuri ಹ್ಯಾಷ್ ಟ್ಯಾಗ್ ಬಳಸಿ ಪ್ರಶ್ನೆ ಕೇಳಬಹುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...