alex Certify ʼಅಮ್ಮʼನಿಗೆ ಏನು ಬೇಕೆಂದು ನಿಮಗೆ ಗೊತ್ತಾ….? ಮುಂಬೈ ಪೊಲೀಸರ ಭಾವಪೂರ್ಣ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಮ್ಮʼನಿಗೆ ಏನು ಬೇಕೆಂದು ನಿಮಗೆ ಗೊತ್ತಾ….? ಮುಂಬೈ ಪೊಲೀಸರ ಭಾವಪೂರ್ಣ ಸಂದೇಶ

ತಮ್ಮ ಟ್ವೀಟ್‌ಗಳು ಹಾಗೂ ಪೋಸ್ಟ್‌ಗಳಿಂದ ಜನಪ್ರಿಯವಾಗಿರುವ ಮುಂಬೈ ಪೊಲೀಸ್‌ನ ಸಾಮಾಜಿಕ ಜಾಲತಾಣ ಘಟಕ ’ಅಗ್ನಿ ಪಥ್’ ಚಿತ್ರದ ದೃಶ್ಯವೊಂದನ್ನು ಬಳಸಿಕೊಂಡು, ಸಾಂಕ್ರಮಿಕದ ವೇಳೆ ಕೈ ತೊಳೆದುಕೊಳ್ಳುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ತನ್ನ ಯತ್ನದಿಂದ ಮೆಚ್ಚುಗೆಗೆ ಪಾತ್ರವಾಗಿದೆ.

1990ರ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್‌, ರೋಹಿಣಿ ಹಾಗೂ ನೀಲಂ ಕೊಠಾರಿ ಭೋಜನ ಸವಿಯುವ ವೇಳೆ ಸಂವಹನ ನಡೆಸುವ ದೃಶ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೃಶ್ಯದಲ್ಲಿ ಬಚ್ಚನ್ ಪಾತ್ರಧಾರಿ ಊಟ ಮಾಡುವ ಮುನ್ನ ಕೈ ತೊಳೆಯುವುದನ್ನು ಮರೆತಾಗ ತಾಯಿ ಪಾತ್ರಧಾರಿ ಆತನಿಗೆ ಬೈದು ಬುದ್ಧಿವಾದ ಹೇಳುವುದನ್ನು ನೋಡಬಹುದಾಗಿದೆ.

ವಾಟ್ಸಾಪ್‌ ಬಳಕೆದಾರರಿಗೊಂದು ಮುಖ್ಯ ಮಾಹಿತಿ: ಹೊಸ ನೀತಿಗೆ ಸಮ್ಮತಿಸದಿದ್ದಲ್ಲಿ ʼಬಂದ್ʼ‌ ಆಗಲಿದೆ ಸೇವೆ

“ಅಮ್ಮನಿಗೆ ಏನು ಇಷ್ಟವೆಂದು ನೀವೆಂದಾದರೂ ತಿಳಿಯಲು ಯತ್ನಿಸಿದ್ದೀರಾ..?” ಎಂದು ಮುಂಬೈ ಪೊಲೀಸರು ಈ ದೃಶ್ಯಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.

View this post on Instagram

A post shared by Mumbai Police (@mumbaipolice)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...