alex Certify ಸದ್ಗುರು ಭೇಟಿಯಾದ ಹಾಲಿವುಡ್​ ನಟ ವಿಲ್​ ಸ್ಮಿತ್​ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಗುರು ಭೇಟಿಯಾದ ಹಾಲಿವುಡ್​ ನಟ ವಿಲ್​ ಸ್ಮಿತ್​ ಕುಟುಂಬ

ಹಾಲಿವುಡ್​ ನಟ ವಿಲ್​ ಸ್ಮಿತ್​ ಕುಟುಂಬ ಇಶಾ ಫೌಂಡೇಶನ್​ ಸಂಸ್ಥಾಪಕ ಸದ್ಗುರು ಅವರನ್ನ ಭೇಟಿಯಾಗಿದ್ದಾರೆ. ಈ ಫೋಟೋವನ್ನ ಸ್ವತಃ ಸದ್ಗುರು ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ವಿಲ್​, ನಿಮ್ಮ ಹಾಗೂ ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಸಂಘವು ಬಲವಾಗಿರಲಿ ಹಾಗೂ ಧರ್ಮ ನಿಮಗೆ ಮಾರ್ಗದರ್ಶಿಯಾಗಲಿ ಅಂತಾ ಸದ್ಗುರು ಬರೆದಿದ್ದಾರೆ .

ವಿಲ್​ ಹಾಗೂ ಸದ್ಗುರು ಇಬ್ಬರೂ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ ಸದ್ಗುರು ಬೈಕ್​ನಲ್ಲಿ ಸ್ಮಿತ್​ ನಿವಾಸಕ್ಕೆ ಆಗಮಿಸ್ತಾರೆ, ಈ ವೇಳೆ ವಿಲ್​, ನಾನು ಕೆಲ ಸಮಯದಿಂದ ಸದ್ಗುರು ಅವರನ್ನ ಫಾಲೋ ಮಾಡ್ತಿದ್ದೇನೆ. ಅವರು ಬರೆದಿರೋ ಇನರ್​ ಇಂಜಿನಿಯರಿಂಗ್​ ಎಂಬ ಪುಸ್ತಕ ಅದ್ಭುತವಾಗಿದೆ. ನನ್ನ ಕುಟುಂಬ ಇಂತಹ ಮಹಾನ್​ ವ್ಯಕ್ತಿಯನ್ನ ಭೇಟಿಯಾಗೋಕೆ ಬಯಸುತ್ತಿತ್ತು ಅಂತಾ ವಿಡಿಯೋದಲ್ಲಿ ಸ್ಮಿತ್​ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...