alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರೂಪದ ಹಾವನ್ನು ಕೈಯಲ್ಲಿಡಿದು ಸಂಭ್ರಮಿಸಿದ ಖ್ಯಾತ ನಟಿ

ಅಚ್ಚರಿ ಜತೆ ಅಪರೂಪದ ಅನುಭವ ಪಡೆದ ಹಾಲಿವುಡ್ ಖ್ಯಾತ ನಟಿ ಕೇಟ್ ಮಿಡಲ್ಟನ್ ಜೀವನದಲ್ಲಿ ಮೊದಲ ಬಾರಿಗೆ ಹಾವನ್ನು ಸ್ಪರ್ಶಿಸಿ ಸಂಭ್ರಮಿಸಿದ್ದಾರೆ.

ಉತ್ತರ ಐರ್ಲೆಂಡ್ ಗೆ ಕೇಟ್ ಕುಟುಂಬ ಸಹಿತ ಭೇಟಿ ನೀಡಿದ್ದು, ಅಲ್ಲಿನ ಬೆಲ್ಫಾಸ್ಟ್ ನಲ್ಲಿರುವ ಓಕ್ ಫಾರ್ಮ್ ಗೆ ತೆರಳಿದ್ದರು.

ಅತಿಥಿಗಳನ್ನು ಪರಿಚಯಿಸಿಕೊಂಡ ಬಳಿಕ ರಿಗಲ್ಸ್ ವರ್ಥ್ ಎಂಬುವರು ಅಪರೂಪದ ಹಾವನ್ನು ಕೈಯಲ್ಲಿ ಹಿಡಿದು ತಂದು ಕೇಟ್ ಅವರ ಮುಂದೆ ಹಿಡಿದಿದ್ದಾರೆ.

ಮೊದಲಿಗೆ ಅಚ್ಚರಿ ಪಟ್ಟ ಕೇ ಬಳಿಕ ತನ್ನ ಕೈಗೆ ತೆಗೆದುಕೊಂಡರು. ಅದರ ಮೈ ನೇವರಿಸಿ ತನ್ನ ಮಗುವಿನ ಕೈಯ್ಯಲ್ಲೂ ಮುಟ್ಟಿಸಿದರು.

ಜೀವನದಲ್ಲಿ ಮೊದಲ ಬಾರಿಗೆ ಹಾವನ್ನು ಮುಟ್ಟಿದ್ದೇನೆ. ಎಷ್ಟು ಸಂತಸ ಆಗುತ್ತಿದೆ ಎಂದರೆ ಹೇಳಿಕೊಳ್ಳಲಾಗದು ಎಂದು ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...