alex Certify ಮಗನೊಂದಿಗೆ ಮನೆಯಲ್ಲೇ ವರ್ಕೌಟ್‌ ಮಾಡಿದ ಸೋನು ಸೂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನೊಂದಿಗೆ ಮನೆಯಲ್ಲೇ ವರ್ಕೌಟ್‌ ಮಾಡಿದ ಸೋನು ಸೂದ್

ಲಾಕ್ ಡೌನ್ ಸಂದರ್ಭದಲ್ಲಿ‌ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ಸಾರಿಗೆ ವ್ಯವಸ್ಥೆ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಪ್ರೇರಣಾದಾಯಕ ಕೆಲಸ ಮಾಡಿದ್ದಾರೆ.

ವಲಸೆ ಕಾರ್ಮಿಕರಿಗೆ ಸಾರಿಗೆ ಸೌಕರ್ಯ ನೀಡಿ, ಅವರನ್ನೆಲ್ಲ ಮನೆ ಸೇರಿಕೊಳ್ಳುವಂತೆ ಮಾಡಿದ್ದ ಸೋನು ಕಾರ್ಯಗಳು ಜನಮೆಚ್ಚಿಗೆಗೆ ಪಾತ್ರವಾಗಿದ್ದವು. ಇದೀಗ ಮನೆಯಲ್ಲಿ ಮಗನೊಂದಿಗೆ ಕಸರತ್ತು ನಡೆಸಿರುವ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಿಮ್ ನಲ್ಲಿ ಕಸರತ್ತು ಮಾಡಲು ಅವಕಾಶ ಇಲ್ಲದ್ದರಿಂದ ಹಾಗೂ ದೇಹದಾರ್ಢ್ಯತೆ ಕಾಪಾಡಿಕೊಳ್ಳಲೂ ಬೇಕಿರುವುದರಿಂದ ಮನೆಯಲ್ಲಿಯೇ ವರ್ಕೌಟ್ ಮಾಡಿದ್ದಾರೆ.

ಪುತ್ರ ಇಶಾನ್ ಸೂದ್ ರನ್ನು ತಮ್ಮ ಬೆನ್ನ ಮೇಲಿರಿಸಿಕೊಂಡು ಪುಶಪ್ಸ್ ಮಾಡಿದ್ದು, ವಿಶೇಷ ರೀತಿಯ ಕಸರತ್ತಿನ ಮೂಲಕ ಮಗನ ದೇಹಾರೋಗ್ಯದತ್ತಲೂ ಗಮನ ಹರಿಸಿದ್ದಾರೆ. ಸೂದ್ ಜೋಡಿಯ ಈ ವಿಡಿಯೋ ಇದೀಗ ವೈರಲ್ ಆಗಿದೆ.

View this post on Instagram

Twinning ? @eshaansoood

A post shared by Sonu Sood (@sonu_sood) on

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...