alex Certify ಧೋನಿ ಪುತ್ರಿ ಬಳಿಕ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಪುತ್ರಿ ಬಳಿಕ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ

ಶ್ರೀಲಂಕಾ ಕ್ರಿಕೆಟ್​ ಟೀಂನ ಮಾಜಿ ನಾಯಕ ಮುತ್ತಯ್ಯ ಮುರುಳೀಧರನ್​ ಜೀವನ ಆಧಾರಿತ ಸಿನಿಮಾ ‘800’ರಿಂದ ತಮಿಳು ನಟ ವಿಜಯ್​ ಸೇತುಪತಿ ಹೊರಬಂದಿದ್ದಾರೆ. ಈ ಸಿನಿಮಾಗೆ ತಮಿಳಿಗರಿಂದ ಭಾರೀ ವಿರೋಧ ಕೇಳಿ ಬಂದ ಹಿನ್ನೆಲೆ ವಿಜಯ್​ ಸೇತುಪತಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಆದರೆ ಸಿನಿಮಾದಿಂದ ಹೊರಬಂದರೂ ಕೂಡ ವಿಜಯ್​ ಮೇಲಿನ ಕೋಪ ಕಡಿಮೆಯಾದಂತೆ ಕಾಣ್ತಿಲ್ಲ. ವಿಜಯ್​ ಸೇತುಪತಿ ಮಾಡಿದ್ದ ಟ್ವೀಟ್​ಗೆ ಟ್ರೋಲ್​ ಮೂಲಕ ರಿಪ್ಲೈ ಕೊಡಲಾಗಿದ್ದು ಇದರಲ್ಲಿ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪುತ್ರಿಗೆ ಅಪ್ರಾಪ್ತನೊಬ್ಬ ಅತ್ಯಾಚಾರದ ಬೆದರಿಕೆ ಹಾಕಿ ಜೈಲುಪಾಲಾಗಿದ್ದ. ಈ ಬೆನ್ನಲ್ಲೇ ಇದೀಗ ವಿಜಯ್​ ಸೇತುಪತಿ ಪುತ್ರಿಗೂ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.

ಈ ಅಶ್ಲೀಲ ಟ್ರೋಲ್​​ ಟ್ವಿಟರ್​ನಲ್ಲಿ ವೈರಲ್​ ಆಗ್ತಿದ್ದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಖಾತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್​ ಸಂಸ್ಥೆಗೆ ಆಗ್ರಹಿಸಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪದಾ ಚೆನ್ನೈ ಪೊಲೀಸರು ಹಾಗೂ ಆಡ್ಯಾರ್​ ಡೆ. ಕಮಿಷನರ್​ಗೆ ಟ್ಯಾಗ್​ ಮಾಡಿ ಟ್ರೋಲ್​ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಕೋರಿದ್ದಾರೆ.

ಮುತ್ತಯ್ಯ ಮುರಳೀಧರನ್​ 2009ರಲ್ಲಿ ತಮಿಳಿಗರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಜೀವನ ಆಧಾರಿತ ತಮಿಳು ಸಿನಿಮಾ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...