alex Certify ಸಹಾಯಕ್ಕೆ ಮುಂದಾಗಿರುವ ನಟನ ಬಳಿ ಮದ್ಯದಂಗಡಿಗೆ ತಲುಪಿಸಲು ಕೋರಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಾಯಕ್ಕೆ ಮುಂದಾಗಿರುವ ನಟನ ಬಳಿ ಮದ್ಯದಂಗಡಿಗೆ ತಲುಪಿಸಲು ಕೋರಿದ ಭೂಪ…!

ನಟ ಸೋನು ಸೂದ್ ಕೊರೋನಾ ಮಹಾಮಾರಿಯ ಈ ಸಮಯದಲ್ಲಿ ತಮ್ಮ ದಾನ ಬುದ್ಧಿಯಿಂದ ಸಾಕಷ್ಟು ಪ್ರಶಂಸೆ ಪಡೆದಿದ್ದಾರೆ. ವಲಸೆ ಕಾರ್ಮಿಕರ ನೋವುಗಳಿಗೆ ಸ್ಪಂದಿಸಿದ ಅವರು, ಊಟದ ವ್ಯವಸ್ಥೆಯೊಂದಿಗೆ ಅವರನ್ನು ಅವರ ಊರಿಗೆ ಕಳುಹಿಸಿ ಕೊಟ್ಟಿದ್ದಾರೆ. ಟ್ವಿಟರ್ ಖಾತೆಯಲ್ಲಿ ಬಿಹಾರದ ವ್ಯಕ್ತಿ ತಮಗೆ ತಮ್ಮ ಊರಾದ ದರ್ಭಾಂಗ್ ಗೆ ಹೋಗಲು ಸಹಾಯ ಮಾಡಲು ಸಾಧ್ಯವೇ ಎಂದು ಕೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಟ ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದು, ಅವರ ಬಿಸಿನೆಸ್ ಪಾಲುದಾರ ನೀತಿ ಗೋಯಲ್ ಜೊತೆ ಸೇರಿ, 350 ಕಾರ್ಮಿಕರನ್ನು ಬಸ್ ಗಳ ಮೂಲಕ ಮೇ 12 ರಂದು ಅವರ ಊರಿಗೆ ಕಳುಹಿಸಿ ಕೊಟ್ಟಿದ್ದಾರೆ.

ಟ್ವಿಟ್ಟರ್ ನಲ್ಲಿ ಅವರಿಗೆ ಸಹಾಯದ ಬೇಡಿಕೆ ಸಾಕಷ್ಟು ಬಂದಿದೆ, ಆದರೆ ಒಂದು ಬೇಡಿಕೆ ಎಲ್ಲರ ಗಮನ ಸೆಳೆದಿದೆ. ಬುಲ್ಲ ಬಾಯ್ ಎಂಬ ಖಾತೆಯಿಂದ, ಸೋನು ಅಣ್ಣ ನಾನು ಮನೆಯನ್ನು ತಲುಪಿದ್ದೇನೆ. ಮನೆಯಿಂದ ಮದ್ಯದಂಗಡಿ ತಲುಪಲು ಸಹಾಯ ಮಾಡಿ ಎಂದು ಕೋರಿದ್ದಾನೆ. ಇದಕ್ಕೆ ಸೋನು ಹಾಸ್ಯ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಮನೆಯಿಂದ ಮದ್ಯದಂಗಡಿಗೆ ತಲುಪಿಸಲು ಸಾಧ್ಯವಿಲ್ಲ. ಆದರೆ, ಮದ್ಯದಂಗಡಿಯಿಂದ ಮನೆಗೆ ತಲುಪಿಸಬಲ್ಲೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...