alex Certify `ದಿ ಫ್ಯಾಮಿಲಿ ಮ್ಯಾನ್ -2’ ವೆಬ್ ಸರಣಿ ಕಿರೀಟಕ್ಕೊಂದು ಗರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ದಿ ಫ್ಯಾಮಿಲಿ ಮ್ಯಾನ್ -2’ ವೆಬ್ ಸರಣಿ ಕಿರೀಟಕ್ಕೊಂದು ಗರಿ

The Family man 2

ಕೊರೊನಾ,‌ ಲಾಕ್ ಡೌನ್ ನಿಂದಾಗಿ ಸಿನಿಮಾ ಥಿಯೇಟರ್ ಗಳ ಬಾಗಿಲು ಮುಚ್ಚಿದೆ. ಆದ್ರೆ ಪ್ರೇಕ್ಷಕರಿಗೆ ಮನರಂಜನೆ ಮಾತ್ರ ಕಡಿಮೆಯಾಗಿಲ್ಲ. ಆನ್ಲೈನ್ ನಲ್ಲಿಯೇ ಸಾಕಷ್ಟು ಮನರಂಜನೆ ಸಿಗ್ತಿದೆ. ವೆಬ್ ಸರಣಿಗಳನ್ನು ವೀಕ್ಷಿಸುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಪ್ರೇಕ್ಷಕರು ಇಷ್ಟಪಟ್ಟಿರುವ ಮನೋಜ್ ಬಾಜಪೇಯಿ ಅಭಿನಯದ ʼದಿ ಫ್ಯಾಮಿಲಿ ಮ್ಯಾನ್ ‌2ʼ ಮತ್ತೊಂದು ದಾಖಲೆ ಬರೆದಿದೆ.

ಮನೋಜ್ ಬಾಜಪೇಯಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶ್ವದ ಜನಪ್ರಿಯ ವೆಬ್ ಸರಣಿಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಜನಪ್ರಿಯ ವೆಬ್ ಸರಣಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 10 ರಲ್ಲಿ 8.8 ರೇಟಿಂಗ್ ಸಿಕ್ಕಿದೆ. ಈ ಪಟ್ಟಿಯಲ್ಲಿ ಲೋಕಿ ಮೊದಲ ಸ್ಥಾನದಲ್ಲಿದೆ. ಸ್ವೀಟ್ ಟೂತ್ ಎರಡನೆಯ ಸ್ಥಾನದಲ್ಲಿದೆ. ಮಿಯರ್ ಆಫ್ ಈಸ್ಟ್ ಟೌನ್ ಮೂರನೇ ಸ್ಥಾನದಲ್ಲಿದೆ.

ಈ ವೆಬ್‌ ಸರಣಿಯ ಎರಡನೇ ಭಾಗವನ್ನು ಜೂನ್ 4 ರಂದು ಅಮೆಜಾನ್ ಪ್ರೈಮ್‌ನ ಬಿಡುಗಡೆ ಮಾಡಲಾಗಿತ್ತು. ಸರಣಿಯ ಪ್ರತಿಯೊಂದು ಪಾತ್ರವೂ ವಿಶೇಷವಾಗಿದೆ. ಎಲ್ಲರ ಅಭಿನಯ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...