alex Certify ಸುಶಾಂತ್ ಸಿಂಗ್ ಪ್ರಕರಣ: ಗೆಳತಿ ರಿಯಾ ಚಕ್ರವರ್ತಿಗೆ ED ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ಪ್ರಕರಣ: ಗೆಳತಿ ರಿಯಾ ಚಕ್ರವರ್ತಿಗೆ ED ಬಿಗ್ ಶಾಕ್

Actor Rhea Chakraborty Summoned In Sushant Rajput Money Laundering Case

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲು ನಟಿ ರಿಯಾ ಚಕ್ರವರ್ತಿಗೆ ಸಮನ್ಸ್ ಜಾರಿ ಮಾಡಿದೆ.

ಸುಶಾಂತ್ ಸಿಂಗ್ ಅವರಿಗೆ ಸಂಬಂಧಿತ ಖಾತೆಯಿಂದ 15 ಕೋಟಿ ರೂಪಾಯಿ ಅನುಮಾನಾಸ್ಪದ ವಹಿವಾಟು ನಡೆಸಿದಕ್ಕೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ರಿಯಾ ಚಕ್ರವರ್ತಿಗೆ ನೋಟಿಸ್ ಜಾರಿ ಮಾಡಿದೆ.

ಬಿಹಾರ ಪೊಲೀಸರ ಪ್ರಥಮ ಮಾಹಿತಿ ವರದಿ ಎಫ್ಐಆರ್ ಗಮನಿಸಿದ ಜಾರಿ ನಿರ್ದೇಶನಾಲಯ ನಂತರದಲ್ಲಿ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ. ಸುಶಾಂತ್ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಅವರ ಸಾವು ಮತ್ತು ಹಣಕಾಸು ವಹಿವಾಟಿನ ಕುರಿತಾಗಿ ತನಿಖೆ ನಡೆಸಲಾಗಿದೆ.

ಸುಶಾಂತ್ ಬ್ಯಾಂಕ್ ಖಾತೆಯಲ್ಲಿ ಅನುಮಾನಾಸ್ಪದ ವಹಿವಾಟಿನ ಕುರಿತಾಗಿ ಪರಿಶೀಲನೆ ನಡೆಸಿದ್ದು, ಶಂಕಿತ ವ್ಯಕ್ತಿಗಳಿಗೆ ಮುಂದಿನ ವಾರದಲ್ಲಿ ಸಮನ್ಸ್ ನೀಡಲಾಗುವುದು. ತನಿಖೆಗೆ ಸಹಕರಿಸಲು ಮತ್ತು ವಿಚಾರಣೆಗೆ ಹಾಜರಾಗಲು ಸೂಚಿಸಲಾಗುವುದು. ಕಳೆದ ವಾರದಿಂದ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಬಿಹಾರದ ಪಾಟ್ನಾ ಪೊಲೀಸರು ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರನಿಗೆ ಸಂಬಂಧಿಸಿದ ಕಂಪನಿಗಳ ವಹಿವಾಟು ಮತ್ತು ಹೂಡಿಕೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಮಗನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದು, ಆತನ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುಶಾಂತ್ ತಂದೆ ದೂರು ನೀಡಿದ್ದು ಹೂಡಿಕೆಗಳು ಕಾನೂನುಬದ್ಧವಾಗಿವೆಯೇ ಎಂಬುದರ ಕುರಿತಾಗಿ ತನಿಖೆ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...