alex Certify ‘ಹ್ಯಾಪಿ ಬರ್ತಡೇ ಲೆಜೆಂಡ್’ ಶಿವಣ್ಣ ಹುಟ್ಟುಹಬ್ಬ – ಅಭಿಮಾನಿಗಳ ಆಸೆಗೆ ಸುದೀಪ್ ಸಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹ್ಯಾಪಿ ಬರ್ತಡೇ ಲೆಜೆಂಡ್’ ಶಿವಣ್ಣ ಹುಟ್ಟುಹಬ್ಬ – ಅಭಿಮಾನಿಗಳ ಆಸೆಗೆ ಸುದೀಪ್ ಸಾಥ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ.

‘ದಿ ವಿಲನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಶಿವಣ್ಣ ಮತ್ತು ಸುದೀಪ್ ಮತ್ತೆ ಒಂದಾಗಿ ನಟಿಸಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ. ಜುಲೈ 12 ರಂದು ಶಿವರಾಜ್ ಕುಮಾರ್ ಹುಟ್ಟುಹಬ್ಬದ ದಿನವಾಗಿದೆ. ಈ ಬಾರಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.

ಕೊರೋನಾ ಕಾರಣದಿಂದ ಅಭಿಮಾನಿಗಳು ಎಚ್ಚರ ವಹಿಸಬೇಕೆಂದು ಶಿವಣ್ಣ ತಿಳಿಸಿದ್ದು, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಯಾರು ಬರಬೇಡಿ, ಸೇಫಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶಿವಣ್ಣ ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ್ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಶಿವಣ್ಣನ ಅಭಿಮಾನಿಗಳು ಡಿಪಿಗಾಗಿ ವಿಶೇಷ ಫೋಟೋವನ್ನು ಲಾಂಚ್ ಮಾಡುವಂತೆ ಸುದೀಪ್ ಅವರನ್ನು ಕೇಳಿದ್ದು, ಶಿವಣ್ಣನ ಅಭಿಮಾನಿಗಳ ಮೇಲಿನ ಅಭಿಮಾನಕ್ಕೆ ಮನಸೋತ ಸುದೀಪ್ ಕಾಮನ್ ಡಿಪಿ(CPD) ರಿಲೀಸ್ ಮಾಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...