alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಸೋನು ಸೂದ್ ರಿಂದ ಮತ್ತೊಂದು ಮಾನವೀಯ ಕಾರ್ಯ

Sonu Sood 'Adopts' Three Orphan Kids from Telangana, Gets ...

ಮುಂಬೈ: ಬಾಲಿವುಡ್ ನಟ, ನಿರ್ಮಾಪಕ ಸೋನು ಸೂದ್ ಕಳೆದ ಕೆಲ ತಿಂಗಳಲ್ಲಿ ಸಾಕಷ್ಟು‌ ಮಾನವೀಯ ಕಾರ್ಯ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಹಿಂದಿ, ಕನ್ನಡ, ತೆಲಗು, ತಮಿಳು, ಪಂಜಾಬಿ ಭಾಷೆಗಳ ಚಿತ್ರದ ಸ್ಟಾರ್ ನಟನಾಗಿರುವ ಇವರು, ತಮ್ಮ ಕಾರ್ಯಗಳ ಮೂಲಕ ನಿಜ ಜೀವನದಲ್ಲೂ ಸ್ಟಾರ್ ಎನಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಲಾಕ್‌ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದ ಮಹಿಳೆಗೆ ನೆರವಾಗಿದ್ದರು. ಈಗ ತೆಲಂಗಾಣದ ಭುವನಗಿರಿ ಜಿಲ್ಲೆಯ ಮೂವರು ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ.

ಪಾಲಕರಿಲ್ಲದ ಒಡಹುಟ್ಟಿದವರು ತಾವೇ ಅಡುಗೆ, ಹಾಗೂ ಮನೆಗೆಲಸ ಮಾಡುತ್ತ ಒಬ್ಬರಿಗೊಬ್ಬರು ಸಹಕಾರಿಯಾಗುವ ವಿಡಿಯೋ ಹಾಗೂ ಫೋಟೋಗಳನ್ನು ಪತ್ರಕರ್ತ ರಾಜೇಶ ಕರನ್ನಮ್ ಸೋನು ಸೂದ್ ಅವರಿಗೆ ಟ್ವೀಟ್ ಮಾಡಿದ್ದರು‌. ಕೇವಲ 15 ನಿಮಿಷದಲ್ಲಿ ಸೋನು ಪ್ರತಿಕ್ರಿಯಿಸಿದ್ದು, “ಅವರಿನ್ನು ಅನಾಥರಲ್ಲ. ಅವರನ್ನು ಪೋಷಿಸುವ ಜವಾಬ್ದಾರಿ ನನ್ನದು” ಎಂದು ಟ್ವೀಟ್ ಮಾಡಿದ್ದರು.‌ ಮಾತಿನಂತೆ ದತ್ತು ಪಡೆದು‌ ಮಕ್ಕಳ ಜತೆ ಆನ್ ಲೈನ್ ನಲ್ಲಿ ಮಾತನಾಡಿದ್ದಾರೆ.‌

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...