alex Certify ಬಾಲಿವುಡ್ ಖ್ಯಾತ ನಿರ್ದೇಶಕನ ಆತ್ಮಚರಿತ್ರೆಯ ಮುಖಪುಟ ಅನಾವರಣಗೊಳಿಸಿದ ಸೋನಂ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಖ್ಯಾತ ನಿರ್ದೇಶಕನ ಆತ್ಮಚರಿತ್ರೆಯ ಮುಖಪುಟ ಅನಾವರಣಗೊಳಿಸಿದ ಸೋನಂ ಕಪೂರ್​

ಬಾಲಿವುಡ್​ನ ಹೆಸರಾಂತ ಸಿನಿಮಾಗಳಾದ ರಂಗ್​ ದೇ ಬಸಂತಿ, ಡೆಲ್ಲಿ 6, ಭಾಗ್​ ಮಿಲ್ಕಾ ಭಾಗ್​​ ನೀಡಿರುವ ನಿರ್ದೇಶಕ ರಾಕೇಶ್​ ಓಮ್​ಪ್ರಕಾಶ್​ ಮೆಹ್ರಾ ಆವರ ಆತ್ಮಚರಿತ್ರೆ ʼದಿ ಸ್ಟ್ರೇಂಜರ್​ ಇನ್​ ದಿ ಮಿರರ್ʼ​​ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕದ ಮುಖಪುಟವನ್ನ ಬಾಲಿವುಡ್​​ ನಟಿ ಸೋನಮ್​ ಕಪೂರ್​ ಅನಾವರಣಗೊಳಿಸಿದ್ದಾರೆ.

ಸೋನಮ್​ ಹಾಗೂ ರಾಕೇಶ್​​ ಡೆಲ್ಲಿ 6 ಹಾಗೂ ಭಾಗ್​ ಮಿಲ್ಕಾ ಭಾಗ್​​ನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಆತ್ಮಚರಿತ್ರೆಯ ಮುಖಪುಟದ ಜೊತೆಯಲ್ಲಿ ನಟಿ ಸೋನಮ್​ ಕಪೂರ್,​​ ರಾಕೇಶ್​ ಜೊತೆಗಿನ ಹಳೆಯ ಫೋಟೋಗಳನ್ನೂ ಶೇರ್​ ಮಾಡಿದ್ದಾರೆ.

ಈ ಪುಸ್ತಕದ ಮುಖಪುಟವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ನಟಿ ಸೋನಮ್​ ಕಪೂರ್, ಸಿನಿ ಇಂಡಸ್ಟ್ರಿಯಲ್ಲಿ ಮೆಹ್ರಾ ಅನೇಕ ನಟರಿಗೆ ಒಳ್ಳೆಯ ಮಾರ್ಗದರ್ಶಕರಾಗಿದ್ದಾರೆ. ಅವರು ಪರದೆಯ ಮೇಲೆ ದೃಶ್ಯವನ್ನ ಅನಾವರಣಗೊಳಿಸಿರೋದು ಸಹ ನಿಜಕ್ಕೂ ಮಾಂತ್ರಿಕ ಶಕ್ತಿಯೇ ಆಗಿದೆ. ಇದೀಗ ಅವರು ತಮ್ಮ ಪ್ರಯಾಣವನ್ನ ಈ ಪುಸ್ತಕದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದೇ ನೋಡಿ ರಾಕೇಶ್​ ಮೆಹ್ರಾರ ಆತ್ಮಚರಿತ್ರೆಯ ಮುಖಪುಟ. 2021ರ ಜುಲೈ 27ರಂದು ಈ ಪುಸ್ತಕ ಅನಾವರಣಗೊಳ್ಳಲಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

View this post on Instagram

A post shared by Sonam K Ahuja (@sonamkapoor)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...