alex Certify ಸೋನಾಕ್ಷಿ ಸಿನ್ಹಾ ʼಸೌಂದರ್ಯʼದ ರಹಸ್ಯ ಕೊನೆಗೂ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನಾಕ್ಷಿ ಸಿನ್ಹಾ ʼಸೌಂದರ್ಯʼದ ರಹಸ್ಯ ಕೊನೆಗೂ ಬಹಿರಂಗ

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಫಿಟ್ನೆಸ್, ಸೌಂದರ್ಯದ ಜೊತೆ ಹೊಳೆಯುವ ಚರ್ಮಕ್ಕೂ ಹೆಸರು ವಾಸಿ. ಸೋನಾಕ್ಷಿ ಬ್ಯೂಟಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಾರೆ. ದಿನ ದಿನಕ್ಕೂ ಸೋನಾಕ್ಷಿ ಮತ್ತಷ್ಟು ಸುಂದರವಾಗಲು ಕಾರಣವೇನು ಗೊತ್ತಾ….?

ಸೋನಾಕ್ಷಿಗೆ ಮೇಕಪ್ ಮಾಡಿಕೊಳ್ಳಲು ತುಂಬಾ ಸಮಯ ಬೇಕಿಲ್ಲವಂತೆ. ಆದ್ರೂ ಮೇಕಪ್ ಗೆ ಮೊದಲು ಒಂದು ಗ್ಲಾಸ್ ನೀರನ್ನು ಅವಶ್ಯಕವಾಗಿ ಸೇವನೆ ಮಾಡ್ತಾಳಂತೆ ನಟಿ. ಪ್ರತಿ ದಿನ 10-12 ಗ್ಲಾಸ್ ನೀರು ಕುಡಿಯುತ್ತೇನೆಂದು ಹೇಳ್ತಾರೆ ಸೋನಾಕ್ಷಿ.

ಮೇಕಪ್ ಮಾಡುವ ಮೊದಲು ಕ್ಲೆಂಜರ್ ನಿಂದ ಮುಖವನ್ನು ಸ್ವಚ್ಛಗೊಳಿಸುತ್ತಾರಂತೆ. ರಾತ್ರಿ ಮಲಗುವ ಮೊದಲು ಕ್ಲೆಂಜರ್ ನಿಂದ ಮುಖವನ್ನು ಸ್ವಚ್ಛಗೊಳಿಸುತ್ತಾರೆ.

ಚರ್ಮದ ತೇವಾಂಶ ಕಾಪಾಡಿಕೊಳ್ಳಲು ಉತ್ತಮ ಕಂಪನಿಯ ಮಾಯಿಶ್ಚೈಸರ್ ಮತ್ತು ಕ್ರೀಂ ಬಳಸುತ್ತಾರೆ.

ಒಳ್ಳೆಯ ಗುಣಮಟ್ಟದ ಹಾಗೂ ತುಂಬಾ ಸಮಯ ಇರುವ ಲಿಪ್ಸ್ಟಿಕ್ ಬಳಸುತ್ತಾರೆ ಸೋನಾಕ್ಷಿ. ಈ ಲಿಪ್ಸ್ಟಿಕ್ ಸೋನಾಕ್ಷಿ ತುಟಿಯ ತೇವಾಂಶವನ್ನು ರಕ್ಷಣೆ ಮಾಡುತ್ತದೆಯಂತೆ.

ಚರ್ಮ ಕಾಂತಿಯುತವಾಗಿ, ತೇವಾಂಶದಿಂದ ಕೂಡಿರಲು ಅಲೋವೆರಾ ಬೆಸ್ಟ್ ಎನ್ನುತ್ತಾರೆ ಸೋನಾಕ್ಷಿ. ಪ್ರತಿ ದಿನ ಅಲೋವೆರಾ ಜೆಲ್ ಬಳಸುತ್ತಾರೆ.

ಚರ್ಮದ ಆರೋಗ್ಯಕ್ಕೆ ಸಮತೋಲನ ಆಹಾರ ಅತ್ಯಗತ್ಯ ಎನ್ನುವ ಸೋನಾಕ್ಷಿ, ಸೌಂದರ್ಯ ವೃದ್ಧಿಗೆ ಸಮತೋಲನ ಆಹಾರದ ಮೊರೆ ಹೋಗಿದ್ದಾರೆ.

ಕೂದಲು ಆರೋಗ್ಯವಾಗಿರಲು ಸೋನಾಕ್ಷಿ ವಾರಕ್ಕೆ ಎರಡು ದಿನ ಕೂದಲಿಗೆ ಮಸಾಜ್ ಮಾಡ್ತಿದ್ದಾರಂತೆ. ತೆಂಗಿನ ಎಣ್ಣೆಯನ್ನು ಮಸಾಜ್ ಗೆ ಬಳಸುವುದಾಗಿ ಸೋನಾಕ್ಷಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...