alex Certify ಲತಾ ಮಂಗೇಶ್ಕರ್‌ ಕುರಿತ ಪೋಸ್ಟ್‌ ಗೆ ಟ್ವಿಟ್ಟರ್‌ ಬಳಕೆದಾರಳ ಮೇಲೆ ಕೆಂಡಾಮಂಡಲಗೊಂಡ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲತಾ ಮಂಗೇಶ್ಕರ್‌ ಕುರಿತ ಪೋಸ್ಟ್‌ ಗೆ ಟ್ವಿಟ್ಟರ್‌ ಬಳಕೆದಾರಳ ಮೇಲೆ ಕೆಂಡಾಮಂಡಲಗೊಂಡ ಅಭಿಮಾನಿಗಳು

Someone on Twitter Called Lata Mangeshkar 'Overrated'. So, a Battle Began

ದೇಶದಲ್ಲಿ ಕೆಲವೊಂದು ವಿಷಯಗಳಿಗೆ ಅದೆಷ್ಟರ ಮಟ್ಟಿಗೆ ಪಾವಿತ್ರ‍್ಯತೆಯ ಲೇಪನ ಮಾಡಲಾಗುತ್ತದೆ ಎಂದರೆ, ಆ ವಿಚಾರಗಳು ಅಥವಾ ವ್ಯಕ್ತಿಗಳ ಬಗ್ಗೆ ರಚನಾತ್ಮಕವಾಗಿಯೂ ಸಹ ಟೀಕೆಗಳನ್ನು ಮಾಡಿದಲ್ಲಿ ಭಾರೀ ವಿವಾದಗಳು ಸೃಷ್ಟಿಯಾಗಿಬಿಡುತ್ತವೆ.

ಕ್ರಿಕೆಟ್, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿಗಳ ಬಗ್ಗೆ ನಕಾರಾತ್ಮಕ ಹೇಳಿಕೆ ಕೊಡುವುದು ಇದರಲ್ಲಿ ಒಂದು. ಹಿನ್ನೆಲೆ ಗಾಯನದಲ್ಲಿ ದೊಡ್ಡ ಹೆಸರಾದ ಲತಾ ಮಂಗೇಷ್ಕರ್‌ ಅವರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳುತ್ತಾ ಬರಲಾಗಿದೆ ಎಂಬ ಅಭಿಪ್ರಾಯವೊಂದು ಟ್ವಿಟರ್‌ನಲ್ಲಿ ಧೂಳೆಬ್ಬಿಸಿದೆ.

@ikaveri ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಟ್ವೀಟ್ ಮಾಡಿ, “ಲತಾ ಮಂಗೇಶ್ಕರ್‌‌ ಗೆ ಒಳ್ಳೆಯ ದನಿ ಇದೆ ಎಂದು ನಂಬುವಂತೆ ಭಾರತೀಯರಿಗೆ ಬ್ರೇನ್‌ ವಾಶ್ ಮಾಡಲಾಗಿದೆ” ಎಂದಿದ್ದಾರೆ.

ಮುಂದುವರೆದು, “ಸಂಗೀತ ಲೋಕದ ಇತರ ದಿಗ್ಗಜರು ಆಕೆಯನ್ನು ಪ್ರಶಂಸೆ ಮಾಡುವುದು ಅವರಿಗಿರುವ ಪ್ರಭಾವದ ಕಾರಣದಿಂದ. ಆಕೆ ಬಹಳ ಪ್ರತೀಕಾರವಾದಿಯೂ, ನಿಷ್ಕರುಣಿಯೂ ಹೌದು. ಆಕೆಯ ಪ್ರಭಾವದಿಂದಾಗಿ ಯಾರೂ ಸಹ ಆಕೆಯನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದು, “ಈಕೆ ತನ್ನ ಸಾಮರ್ಥ್ಯ ಕ್ಷೀಣಿಸಿದ ಬಹಳಷ್ಟು ವರ್ಷಗಳಾದರೂ ಸಹ ಹಾಡುತ್ತಲೇ ಸಾಗಿದ್ದಾರೆ” ಎಂದು ಟ್ವೀಟ್‌ಗಳ ಸರಣಿಯನ್ನೇ ಪೋಸ್ಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬ ಟ್ವಿಟ್ಟಿಗ @twilightfairy, “ಆಕೆಯ ಪ್ರಭಾವಕ್ಕೆ ಸವಾಲಾಗಬಲ್ಲ ಸಾಧ್ಯತೆ ಇದ್ದ ಅನುರಾಧಾ ಪಡ್ವಾಲ್ ಸೇರಿದಂತೆ ಸಾಕಷ್ಟು ಜನರ ವೃತ್ತಿಗಳನ್ನು ಹಾಳು ಮಾಡಿದ್ದಾರೆ” ಎಂದಿದ್ದಾರೆ.

ಇದೇ ವೇಳೆ, ಮೇಲ್ಕಂಡ ಟ್ವಿಟ್‌ಗಳಿಗೆ ನಿರೀಕ್ಷಿತ ಹಾದಿಯಲ್ಲೇ ಲತಾ ಅವರ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ’ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ’ ಎಂಬರ್ಥದ ಮಾತುಗಳಿಂದ ಟೀಕಾಸ್ತ್ರಗಳ ಪ್ರಯೋಗವನ್ನು ಮಾಡಿದ್ದಾರೆ.

ಲತಾ ಬೆಂಬಲಕ್ಕೆ ನಿಂತ ಅಡ್ನಾನ್ ಸಾಮಿ, ರಿಕಿ ಕೇಜ್ ಹಾಗೂ ವಿವೇಕ್ ಅಗ್ನಿಹೋತ್ರಿ ಈ ಆಪಾದನೆಗಳನ್ನು ಅಲ್ಲಗಳೆದಿದ್ದಾರೆ.

“ಕೋತಿಗೇನು ಗೊತ್ತು ಅದ್ರಕದ ಸ್ವಾದ. ಬಾಯಿಬಿಟ್ಟು ನಿಮ್ಮೆಲ್ಲಾ ಅನುಮಾನ ಹೊರಹಾಕುವ ಬದಲು ಮೌನವಾಗಿದ್ದು ಮೂರ್ಖರಂತೆ ಕಾಣಿಸಿಕೊಳ್ಳುವುದು ಲೇಸು” ಎಂದು ಅದ್ನಾನ್ ಸಾಮಿ ಹೇಳಿದ್ದಾರೆ.

“ನಾನು ಸರಸ್ವತಿ ಹಾಗೂ ಆಕೆಯ ಪಾವಿತ್ರ‍್ಯತೆಯಲ್ಲಿ ನಂಬಿಕೆ ಇಟ್ಟಿರುವುದೇ ಲತಾ ಮಂಗೇಶ್ಕರ್‌ ಅವರ ಕಾರಣದಿಂದ. ದೆವ್ವಗಳನ್ನು ನಂಬುವುದು ಆಕೆಯ ದ್ವೇಷಿಗಳ ಕಾರಣದಿಂದ” ಎಂದು ವಿವೇಕ್ ಅಗ್ನಿಹೋತ್ರಿ ಹೇಳಿಕೊಂಡಿದ್ದಾರೆ.

“ನಾನು ಈ ಮಾತನ್ನು ಸುತಾರಾಂ ಒಪ್ಪುವುದಿಲ್ಲ. ಇದು ನಿಜವೇ ಆಗಿದ್ದಲ್ಲಿ, ನೂರಾರು ಹೊಸ ಹಾಡುಗಳು ಹಾಗೂ ಗಾಯಕರ ನಡುವೆ ಅವರ ಹಳೆಯ ಹಾಡುಗಳು ಇಂದಿಗೂ ಅಮರವಾಗಿ ಇರುತ್ತಿರಲಿಲ್ಲ. ನಾನು ಅವರೊಂದಿಗೆ ಖುದ್ದಾಗಿ ಸಾಕಷ್ಟು ಬಾರಿ ಮಾತನಾಡಿದ್ದು, ಅವರು ನಿಜಕ್ಕೂ ವಿನಯವಂತರು ಹಾಗೂ ಮಗುವಿನಂಥ ಉತ್ಸಾಹವನ್ನು ತಾವು ಆರಿಸಿಕೊಂಡ ಕಲೆಯ ಮೇಲೆ ಇಟ್ಟುಕೊಂಡವರು. ಸಕಾರಣಗಳಿಂದಾಗಿಯೇ ಅವರು ದಂತಕಥೆ ಆಗಿದ್ದಾರೆ” ಎಂದು ರಿಕಿ ಕೇಜ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...