alex Certify ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದ ‘ಸೈನಾ’ ಸಿನಿಮಾದ ಪೋಸ್ಟರ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದ ‘ಸೈನಾ’ ಸಿನಿಮಾದ ಪೋಸ್ಟರ್​…!

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಅಭಿನಯದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಜೀವನಾಧಾರಿತ ಸಿನೆಮಾ ʼಸೈನಾʼದ ಮೊದಲ ಪೋಸ್ಟರ್​ ರಿಲೀಸ್​ ಆಗಿದೆ. ಅಮೋಲ್​ ಗುಪ್ತೆ ನಿರ್ದೇಶನದ ಈ ಸಿನಿಮಾ ಮಾರ್ಚ್​ 26ರಂದು ತೆರೆ ಕಾಣಲಿದೆ.

ಶಟಲ್​ಕಾಕ್​ನ್ನು ಸರ್ವ್​ ಮಾಡಲು ಕೈ ತಯಾರಿರುವ ರೀತಿಯಲ್ಲಿ ಪೋಸ್ಟರ್​ ಚಿತ್ರಿಸಲಾಗಿದೆ. ಕೈಯಲ್ಲಿ ತ್ರಿವರ್ಣ ಧ್ವಜದ ಬ್ಯಾಂಡ್ ಇರೋದನ್ನು ನೀವು ಗಮನಿಸಬಹುದು. ಶಟಲ್​ಕಾಕ್​ನ ಗರಿಗಳಲ್ಲಿ ಸೈನಾ ಎಂದು ಬರೆಯಲಾಗಿದೆ.

ಸೈನಾ ಸಿನಿಮಾದ ಈ ಪೋಸ್ಟರ್​ ತುಂಬಾ ಕ್ರಿಯಾಶೀಲವಾಗಿ ಮೂಡಿ ಬಂದಿದೆ. ಆದರೆ ಟ್ವೀಟಗರು ಮಾತ್ರ ಈ ಪೋಸ್ಟರ್​ನ್ನು ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಟೆನ್ನಿಸ್​ ಬಾಲ್​ನಂತೆ ಶಟಲ್​ಕಾಕ್​ನ್ನು ಯಾಕೆ ಸರ್ವ್ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡ್ತಿದ್ದಾರೆ.

ಇದು ಟೆನ್ನಿಸ್​ ಬಾಲ್​ ಸರ್ವ್​ ಮಾಡುವ ರೀತಿಯಲ್ಲಿ ಇಲ್ಲವೇ..? ಬಹುಶಃ ಸೈನಾರನ್ನ ಸಾನಿಯಾ ಎಂದು ಗೊಂದಲ ಮಾಡಿಕೊಂಡಿದ್ದೀರಾ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.

ಇನ್ನೊಬ್ಬ ಟ್ವೀಟಿಗ, ಈ ಪೋಸ್ಟರ್​ ಸೈನಾ ನೆಹ್ವಾಲ್​ಗಿಂತ ಸಾನಿಯಾ ಮಿರ್ಜಾ ಜೀವನ ಚರಿತ್ರೆಗೆ ಹೆಚ್ಚು ಸೂಕ್ತವಾಗಿರುವಂತೆ ಕಾಣ್ತಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟ್ವೀಟಿಗ, ಯಾವ ಬ್ಯಾಡ್ಮಿಂಟನ್​ ಆಟಗಾರ ಈ ರೀತಿ ಶಟಲ್ ಕಾಕ್​ನ್ನು ಸರ್ವ್ ಮಾಡ್ತಾನೆ ಎಂದು ಕೇಳಿದ್ದಾರೆ.

ಬ್ಯಾಡ್ಮಿಂಟನ್​​ನಲ್ಲಿ ಎತ್ತರದ ದಿಕ್ಕಿನಲ್ಲಿ ಸರ್ವ್ ಮಾಡಲಾಗುತ್ತೆ. ಬ್ಯಾಡ್ಮಿಂಟನ್​ ನಿಯಮಾವಳಿಗಳ ಪ್ರಕಾರ ಇಲ್ಲಿ ನಿಮಗೆ ಟೆನ್ನಿಸ್​ ಮಾದರಿಯ ಸರ್ವ್​ ಮಾಡಲು ಅವಕಾಶ ಇರೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...