alex Certify ಬಿಗ್ ನ್ಯೂಸ್: ನಟ ಸಂಜಯ್ ದತ್ ಗೆ 3ನೇ ಹಂತದ ‘ಲಂಗ್ ಕ್ಯಾನ್ಸರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ನಟ ಸಂಜಯ್ ದತ್ ಗೆ 3ನೇ ಹಂತದ ‘ಲಂಗ್ ಕ್ಯಾನ್ಸರ್’

‘ಮುನ್ನಾಭಾಯ್ ಎಂಬಿಬಿಎಸ್’ ಖ್ಯಾತಿಯ ನಟ ಸಂಜಯ್ ದತ್, ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಮೂರನೇ ಹಂತ ತಲುಪಿದೆ ಎಂದು ಹೇಳಲಾಗಿದೆ. ಹೀಗಾಗಿ ಚಿಕಿತ್ಸೆಗೆಂದು ಸಂಜಯ್ ದತ್ ಅಮೆರಿಕಾಗೆ ತೆರಳಲಿದ್ದಾರೆಂದು ತಿಳಿದುಬಂದಿದೆ.

ಉಸಿರಾಟದ ಸಮಸ್ಯೆಯ ಕಾರಣಕ್ಕೆ ಸಂಜಯ್ ದತ್ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿತ್ತು. ಹೀಗಾಗಿ ನೆಚ್ಚಿನ ನಟನಿಗೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಇಲ್ಲ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಈಗ ಬಹಿರಂಗವಾಗಿರುವ ಸುದ್ದಿ ದಿಗ್ಮೂಢರನ್ನಾಗಿಸಿದೆ.

ಇದರ ಮಧ್ಯೆ ಸಂಜಯ್ ದತ್ ಟ್ವೀಟ್ ಒಂದನ್ನು ಮಾಡಿದ್ದು, ಚಿಕಿತ್ಸೆಗಾಗಿ ತಾವು ಕೆಲಕಾಲ ಹೊರಗೆ ಹೋಗಬೇಕಾದ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ವಿರಾಮ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ತಮ್ಮ ಅನಾರೋಗ್ಯದ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...