alex Certify ಸುಶಾಂತ್ ಜೊತೆಗಿನ ವಾಟ್ಸಾಪ್ ಸಂದೇಶ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ ರಿಯಾ ಚಕ್ರವರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಜೊತೆಗಿನ ವಾಟ್ಸಾಪ್ ಸಂದೇಶ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ ರಿಯಾ ಚಕ್ರವರ್ತಿ

ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈಗ ನಟಿ ರಿಯಾ ಚಕ್ರವರ್ತಿ, ತಮ್ಮ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ನಡೆಸಿದ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅದರಲ್ಲಿ ಸುಶಾಂತ್, ಸಹೋದರಿ ಪ್ರಿಯಾಂಕಾ ಕುರಿತ ಅಭಿಪ್ರಾಯದ ಮಾತುಗಳಿವೆ. ಸುಶಾಂತ್ ಸಾವಿಗೆ ರಿಯಾ ಕಾರಣ ಎಂದು ಆತನ ಕುಟುಂಬ ಆರೋಪಿಸಿದ ನಂತರದ ಬೆಳವಣಿಗೆ ಬಳಿಕ ರಿಯಾ ಈ ಸ್ಕ್ರೀನ್ ಶಾಟ್ ಬಹಿರಂಗಪಡಿಸಿದ್ದಾರೆ.

ರಿಯಾ ಮತ್ತು ಆಕೆಯ ಸಹೋದರ ಶೋಯಿಕ್ ರನ್ನು ಸುಶಾಂತ್ ಹೊಗಳಿದ ಸಂಭಾಷಣೆಗಳಿಂದ ಸ್ಕ್ರೀನ್ಶಾಟ್ ಪ್ರಾರಂಭವಾಗುತ್ತದೆ, ನಿಮ್ಮ ಕುಟುಂಬ ಬಹಳ ಎಪಿಕ್. ಶೋಯಿಕ್ ಸಹಾನುಭೂತಿ ಹೊಂದಿರುವಾತ, ನೀವು ನಮ್ಮವರು ಎಂದು ಸುಶಾಂತ್ ಸಂದೇಶ ಕಳಿಸಿದ್ದರು.

ನೀವು ನಗುತ್ತಿರಿ, ಚೆನ್ನಾಗಿ ಕಾಣುತ್ತೀರಿ. ನಾನೀಗ ಮಲಗಲು ಹೊರಟಿದ್ದೇನೆ ಎಂಬಿತ್ಯಾದಿಯಾಗಿ ಚಾಟ್ ಮಾಡಿದ್ದರು ಸುಶಾಂತ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...