alex Certify
ಕನ್ನಡ ದುನಿಯಾ
       

Kannada Duniya

ಬ್ಲೂಫಿಲಂ ನೇರಪ್ರಸಾರಕ್ಕೆ ಮುಂದಾಗಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ: ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಮುಂಬೈ: ಬ್ಲೂಫಿಲಂ ನಿರ್ಮಾಣ ಮತ್ತು ಆಪ್ ಮೂಲಕ ಅವುಗಳನ್ನು ಶೇರ್ ಮಾಡುವ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಆಪ್ ಗಳಲ್ಲಿ ನೀಲಿ ಚಿತ್ರಗಳನ್ನು ನೇರ ಪ್ರಸಾರ ಮಾಡುವ ಚಿಂತನೆಯನ್ನು ರಾಜ್ ಕುಂದ್ರಾ ಹೊಂದಿರುವ ಬಗ್ಗೆ ಗೊತ್ತಾಗಿದೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರಿಗೆ ದಿನಕ್ಕೊಂದು ಹೊಸ ಮಾಹಿತಿ ಗೊತ್ತಾಗುತ್ತಿವೆ. ರಾಜ್ ಕುಂದ್ರಾ ಬ್ಲೂಫಿಲಂ ದಂಧೆಯಲ್ಲಿ ತೊಡಗಿದ್ದರೂ, ಇದರಲ್ಲಿ ಅವರ ಪತ್ನಿ ಶಿಲ್ಪಾ ಶೆಟ್ಟಿ ಪಾತ್ರವಿಲ್ಲ. ಇದುವರೆಗಿನ ತನಿಖೆಯಲ್ಲಿ ಶಿಲ್ಪಾಶೆಟ್ಟಿ ಭಾಗಿಯಾಗಿರುವ ಬಗ್ಗೆ ಯಾವುದೇ ದಾಖಲೆ ಸಿಕ್ಕಿಲ್ಲ.

ಬಾಲಿವುಡ್ ರೀತಿಯಲ್ಲಿ ಬ್ಲೂಫಿಲಂ ದಂಧೆಯನ್ನೇ ಬೃಹತ್ ಉದ್ಯಮವನ್ನಾಗಿ ಮಾಡಿಕೊಳ್ಳುವ ಗುರಿ ಹೊಂದಿದ್ದ ರಾಜ್ ಕುಂದ್ರಾ ಇದಕ್ಕಾಗಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿರುವುದು ಗೊತ್ತಾಗಿದೆ. ಆಪ್ ಗಳಲ್ಲಿ ಬ್ಲೂ ಫಿಲಂಗಳನ್ನು ನೇರ ಪ್ರಸಾರ ಮಾಡುವ ಮೂಲಕ ಭಾರಿ ಹಣ ಗಳಿಸುವುದು ರಾಜ್ ಕುಂದ್ರಾ ಯೋಜನೆಯಾಗಿತ್ತು. ರಾಜ್ ಕುಂದ್ರಾ ಮತ್ತು ಇತರೆ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿನ 7.31 ಕೋಟಿ ರೂ.ಗೆ ಪೊಲೀಸರು ತಡೆಹಿಡಿದ್ದಾರೆ.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...