alex Certify ಅಲ್ಲು ಅರ್ಜುನ್​ ಸ್ಟೈಲ್​ನಲ್ಲಿ ʼವಿಶ್ವ ಯೋಗ ದಿನʼದ ಶುಭಾಶಯ ಕೋರಿದ ರಾಜ್​ ಕುಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್​ ಸ್ಟೈಲ್​ನಲ್ಲಿ ʼವಿಶ್ವ ಯೋಗ ದಿನʼದ ಶುಭಾಶಯ ಕೋರಿದ ರಾಜ್​ ಕುಂದ್ರಾ

ಇನ್​​ಸ್ಟಾಗ್ರಾಂನಲ್ಲಿ ಚಿಯರ್​ಫುಲ್​ ವಿಡಿಯೋಗಳನ್ನ ಶೇರ್​ ಮಾಡುವಲ್ಲಿ ಉದ್ಯಮಿ ರಾಜ್​ ಕುಂದ್ರಾ ಎತ್ತಿದ ಕೈ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಹಾಗೂ ಕುಟುಂಬಸ್ಥರ ಫನ್ನಿ ಕ್ಷಣಗಳನ್ನ ಕುಂದ್ರಾ ಶೇರ್​ ಮಾಡ್ತಾನೇ ಇರ್ತಾರೆ. ಇದೆಲ್ಲದರ ಜೊತೆಯಲ್ಲಿ ರಾಜ್​ ಕುಂದ್ರಾರ ವಿಡಿಯೋ ಎಡಿಟಿಂಗ್​ ಟಾಲೆಂಟ್​ಗೆ ಅಭಿಮಾನಿ ಬಳಗವೇ ಇದೆ ಅನ್ನೋ ಮಾತನ್ನ ನಾವು ತಳ್ಳಿ ಹಾಕೋವಂತಿಲ್ಲ.

ಅದ್ಭುತವಾದ ಫನ್ನಿ ವಿಡಿಯೋ ಹಾಗೂ ಶೀರ್ಷಿಕೆಗಳನ್ನ ಹಾಕುವ ಮೂಲಕ ರಾಜ್​ ಕುಂದ್ರಾ ಸಾವಿರಾರು ಲೈಕ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿ ಬಿಡ್ತಾರೆ. ಅದೇ ವಿಶ್ವ ಯೋಗ ದಿನವಾದ ಇಂದೂ ಸಹ ಪ್ರಸಿದ್ಧ ಬುಟ್ಟ ಬೊಮ್ಮಾ ಹಾಡಿನ ವಿಡಿಯೋವನ್ನ ಎಡಿಟ್​ ಮಾಡಿ ಕ್ಲಿಕ್​ ಆಗಿದ್ದಾರೆ.

ಈ ವಿಡಿಯೋದಲ್ಲಿ ರಾಜ್​ ಕುಂದ್ರಾ, ಅಲ್ಲು ಅರ್ಜುನ್​ ಮುಖವನ್ನ ಅಳಿಸಿ ಹಾಕಿ ತಮ್ಮ ಮುಖವನ್ನ ಸೇರಿಸಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್​ರ ಅದ್ಭುತ ನೃತ್ಯವನ್ನ ರಾಜ್​ ಕುಂದ್ರಾರೇ ಮಾಡಿರುವಂತೆ ಕಾಣಿಸುತ್ತಿದೆ.

“ಇಂದಿಗೆ ನಾನು ಸಂಪೂರ್ಣ ಶಾಖಾಹಾರಿಯಾಗಿ ಬದಲಾಗಿ 1 ವರ್ಷವಾಯ್ತು. ಕಳೆದ ವರ್ಷ ಯೋಗ ದಿನದಂದೇ ನಾನು ಸಸ್ಯಹಾರಿಯಾಗಿ ಬದಲಾಗೋದ್ರ ಜೊತೆಗೆ ಬೆಳಗ್ಗೆ 5 ಗಂಟೆಗೆ ಎದ್ದು ಧಾನ್ಯ ಮಾಡುವ ಅಭ್ಯಾಸವನ್ನ ರೂಢಿಸಿಕೊಂಡಿದ್ದೆ. ಈ ನನ್ನ ಅಭ್ಯಾಸದಿಂದಾಗಿ ಶಾಂತ ಮನಸ್ಥಿತಿ ಹಾಗೂ ಜೀವನದಲ್ಲಿ ಸ್ಪಷ್ಟತೆಯನ್ನ ಕಂಡುಕೊಳ್ಳಲು ಸಾಧ್ಯವಾಯ್ತು. ಅಲ್ಲದೇ ನಾನು ತಿನ್ನುವ ಆಹಾರ ಬೆಳೆದದ್ದು, ಹುಟ್ಟಿದ್ದಲ್ಲ ಎಂದು ಭಾವಿಸಿಕೊಳ್ಳೋಕೆ ನನಗೆ ಖುಷಿ ಎನಿಸುತ್ತೆ. ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು” ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ.

View this post on Instagram

A post shared by Raj Kundra (@rajkundra9)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...