alex Certify ನಟಿ ಶೃತಿಗೆ ಕಮಿಟ್ ಆಗು ಅಂದಿದ್ನಂತೆ ಆ ನಿರ್ಮಾಪಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶೃತಿಗೆ ಕಮಿಟ್ ಆಗು ಅಂದಿದ್ನಂತೆ ಆ ನಿರ್ಮಾಪಕ..!

ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ಮೀಟು ಪ್ರಕರಣಗಳು ಒಂದಲ್ಲ ಎರಡಲ್ಲ. ಕಾಸ್ಟಿಂಗ್ ಕೌಚ್ ಹಾಗೂ ಮೀಟೂ ಆರೋಪಗಳು ಇಡೀ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದ್ದಂತೂ ಸತ್ಯ. ಇದೀಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.

ಇದು ಯಾವ ಚಿತ್ರ ರಂಗವನ್ನೂ ಬಿಟ್ಟಿಲ್ಲ. ಇದೀಗ ಮರಾಠಿ ನಟಿ ಶೃತಿ ಮರಾಠೆ ಮಾತನಾಡಿದ್ದಾರೆ. ತಮಗಾದ ಕಹಿ ಘಟನೆ ಬಗ್ಗೆ ಮಾತನಾಡಿರುವ ಶೃತಿ ಮರಾಠೆ ನಿರ್ಮಾಪಕರೊಬ್ಬರು ನನಗೆ ಒಂದು ರಾತ್ರಿ ಕಮಿಟ್ ಆಗುವಂತೆ ಕೇಳಿದ್ದರು ಎಂದು ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ಚಾನ್ಸ್ ಬೇಕು ಎಂದರೆ ಪಲ್ಲಂಗಕ್ಕೆ ಬರಬೇಕು ಎಂದು ಆ ನಿರ್ಮಾಪಕ ಕೇಳಿದ್ದನಂತೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ್ದ ಶೃತಿ ಹೀರೋಗೂ ಇದೇ ರೀತಿ ಕೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ನಿರ್ಮಾಪಕ ಸುಮ್ಮನಾಗಿದ್ದಾನೆ. ಈ ಘಟನೆ ನಂತರ ಶೃತಿ ನಟಿಸಬೇಕಿದ್ದ ಸಿನಿಮಾದಿಂದ ಆಕೆಯನ್ನು ಕೈಬಿಡಲಾಯ್ತಂತೆ. ಈ ರೀತಿಯ ಕಹಿ ಘಟನೆಯನ್ನು ಶೃತಿ ಹಂಚಿಕೊಂಡಿದ್ದಾರೆ. ನಾವು ಧೈರ್ಯವಾಗಿ ಮುನ್ನುಗ್ಗಿದರೆ ಮಾತ್ರ ಇಂತವರನ್ನು ಮಟ್ಟ ಹಾಕಬಹುದು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...