alex Certify 150 ಕೋಟಿ ರೂ. ವೆಚ್ಚದ ಮೆಗಾ ಪ್ರಾಜೆಕ್ಟ್ ಗೆ ಕೈಹಾಕಿದ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

150 ಕೋಟಿ ರೂ. ವೆಚ್ಚದ ಮೆಗಾ ಪ್ರಾಜೆಕ್ಟ್ ಗೆ ಕೈಹಾಕಿದ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್

‘ಕೆಜಿಎಫ್’ ಚಿತ್ರದ ಮೂಲಕ ದೇಶದ ಗಮನ ಸೆಳೆದ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರದ ಕುರಿತಾಗಿ ಕುತೂಹಲ ಗರಿಗೆದರಿದೆ.

‘ಕೆಜಿಎಫ್ ಚಾಪ್ಟರ್ 2’ ಬಳಿಕ ಪ್ರಶಾಂತ್ ನೀಲ್ ಯಾವ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ಬರೋಬ್ಬರಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಹಣ ಹೂಡಿಕೆ ಮಾಡುತ್ತಿದ್ದು ‘ಕೆಜಿಎಫ್ ಚಾಪ್ಟರ್ 2’ ಪೂರ್ಣಗೊಂಡ ಬಳಿಕ ಪ್ರಶಾಂತ್ ನೀಲ್ ಜೂನಿಯರ್ ಎನ್ಟಿಆರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಜೂನಿಯರ್ ಎನ್ಟಿಆರ್ ಸದ್ಯ ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

‘ಕೆಜಿಎಫ್ ಚಾಪ್ಟರ್ 2’ ಮುಗಿದ ಬಳಿಕ ಪ್ರಶಾಂತ್ ನೀಲ್ ಎನ್ಟಿಆರ್ ಚಿತ್ರಕ್ಕೆ ಸಿದ್ಧತೆ ಕೈಗೊಳ್ಳಲಿದ್ದಾರೆ. ಹೈ ಬಜೆಟ್ ನಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಲಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸುಮಾರು 150 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಜೂನಿಯರ್ ಎನ್ಟಿಆರ್ ಗೆ ಹೊಂದುವಂತಹ ಕಥೆಯನ್ನು ಪ್ರಶಾಂತ್ ನೀಲ್ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...