alex Certify ಯಶ್‌ ಹಾಗೂ ಪ್ರಭಾಸ್‌ ಜೊತೆಗಿರುವ ಫೋಟೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಶ್‌ ಹಾಗೂ ಪ್ರಭಾಸ್‌ ಜೊತೆಗಿರುವ ಫೋಟೋ ಫುಲ್‌ ವೈರಲ್

ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಸೆಟ್ಟೇರಿದೆ. ಚಿತ್ರದ ಮುಹೂರ್ತದಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡಿದ್ದರು. ಹೈದ್ರಾಬಾದ್ ನ ರಾಮಾನಾಯ್ದು ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿದೆ.

ಪ್ರಭಾಸ್ ಜೊತೆ ಯಶ್ ಫೋಟೋಕ್ಕೆ ಫೋಸ್ ನೀಡಿದ್ದು ಒಂದು ಕಡೆಯಾದ್ರೆ ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಪ್ರಭಾಸ್ ಅಭಿನಯದ  ಸಲಾರ್ ಚಿತ್ರದ ನಿರ್ಮಾಣದ ಹೊಣೆ ಹೊತ್ತಿರುವುದು ಇನ್ನೊಂದು ವಿಶೇಷ.

ಬೆಳಿಗ್ಗೆ ಹೈದ್ರಾಬಾದ್ ತಲುಪಿದ್ದ ಯಶ್, ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ನಿರ್ದೇಶಕ ಪ್ರಶಾಂತ್ ನೀಲ್, ಯಶ್ ಹಾಗೂ ಪ್ರಭಾಸ್, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಗೀತ ನಿರ್ದೇಶಕ ರವಿ ಬಸ್ರೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಲಾರ್ ಚಿತ್ರ ಕನ್ನಡ, ತೆಲುಗು, ತಮಿಳು,‌ ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಡಿಸೆಂಬರ್ 22ರಂದು ಪ್ರಭಾಸ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಜೊತೆ ಸಿನಿಮಾ ಮಾಡ್ತಿರುವುದಾಗಿ ಹೇಳಿದ್ದರು. ಈಗಾಗಲೇ ಬಿಡುಗಡೆಯಾಗಿರುವ ಸಲಾರ್ ಫಸ್ಟ್ ಲುಕ್ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹೈದ್ರಾಬಾದ್ ನಲ್ಲಿ ಚಿತ್ರದ ಮುಹೂರ್ತ ಮಾಡ್ತಿರುವುದು ನನಗೆ ಖುಷಿ ತಂದಿದೆ. ಚಿತ್ರದಲ್ಲಿ ನಟಿಸಲು ಉತ್ಸುಕನಾಗಿದ್ದೇನೆಂದು ಪ್ರಭಾಸ್ ಹೇಳಿದ್ದಾರೆ. ಸಲಾರ್ ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ.

EPIC: Prabhas & Yash In One Frame - glbnews.com

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...