alex Certify ಪಾಕ್ ವಿಮಾನ‌ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ‌ ಬದುಕುಳಿದ ವ್ಯಕ್ತಿಗೆ ಭಾರತದಲ್ಲಿದ್ದಾರೆ ಸಂಬಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ವಿಮಾನ‌ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ‌ ಬದುಕುಳಿದ ವ್ಯಕ್ತಿಗೆ ಭಾರತದಲ್ಲಿದ್ದಾರೆ ಸಂಬಂಧಿ

ಶುಕ್ರವಾರ ನಡೆದ ಪಾಕಿಸ್ತಾನ ವಿಮಾನ ದುರಂತದಲ್ಲಿ ಇಬ್ಬರು ಪವಾಡ‌ ಸದೃಶ ರೀತಿಯಲ್ಲಿ ಬದುಕುಳಿದಿದ್ದು, ಅದರಲ್ಲಿ ಬ್ಯಾಂಕ್ ಆಫ್ ಪಂಜಾಬ್ ನ ಉನ್ನತ ಉದ್ಯೋಗಿ ಜಾಫರ್ ಮಸೂದ್ ಕೂಡ ಒಬ್ಬರು. ಅವರು ಭಾರತದ ಜತೆ‌ ಸಂಬಂಧ ಹೊಂದಿದ್ದಾರೆ.

ಮಸೂದ್ ಅವರು ಮೀನಾ ಕುಮಾರಿ ಹಾಗೂ ರಾಜಕುಮಾರ್ ನಟಿಸಿದ ಬಾಲಿವುಡ್ ಸಿನೆಮಾದ ನಿರ್ದೇಶಕ ಕಮಲ್ ಅಮರೋಹಿ ಅವರ ಸಂಬಂಧಿಕರು.‌ ಮಸೂದ್ ಅವರ ತಾಯಿ ಅಮರೋಹಿ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ.

ಮಸೂದ್ ಅವರ ಅಜ್ಜ (ತಾಯಿಯ ತಂದೆ)ಕಮಲ್ ಅಮರೋಹಿ ಅವರ ಸೋದರನಾಗಿದ್ದು, ಅವರು ಪಾಕಿಸ್ತಾನದಲ್ಲಿ ಪತ್ರಕರ್ತರಾಗಿದ್ದರು.

ಮಸೂದ್ ಅವರ ಸಂಬಂಧಿಕರೊಬ್ಬರಾದ ಆದಿಲ್ ಜಾಫರ್ ಮುಂಬೈನಲ್ಲಿ ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆಗಿದ್ದಾರೆ‌. ಆದಿಲ್ ಮಾಧ್ಯಮದ‌ ಜತೆ ಮಾತನಾಡಿದ್ದು, “ನಾನು ಮಸೂದ್ ಕುಟುಂಬದ ಸದಸ್ಯರ‌ ಜತೆ ಮಾತನಾಡಿ ಅವರ ಆರೋಗ್ಯ ವಿಚಾರಿಸಿದೆ.‌ ಮಸೂದ್ ಅವರು ಪವಾಡ ಸದೃಶವಾಗಿ ಬದುಕುಳಿದ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದಾರೆ” ಎಂದಿದ್ದಾರೆ. ಮಸೂದ್ ಅವರ ಮಂಡಿ ಹಾಗೂ ಕುತ್ತಿಗೆಯ ಎಲುಬು ಮುರಿದಿವೆ.

ಪಾಕಿಸ್ತಾನ್ ಇಂಟರ್ ನ್ಯಾಷನಲ್‌ ಏರ್ ಲೈನ್ಸ್ ಗೆ ಸೇರಿದ ವಿಮಾನ ಸಂಖ್ಯೆ ಪಿಎ-8303 ಮೇ 22 ರಂದು ದುರಂತಕ್ಕೀಡಾಗಿದೆ. ಈದ್ ಗಾಗಿ ಲಾಹೋರ್ ಗೆ ತೆರಳುವವರಿಗಾಗಿ ಈ ವಿಶೇಷ ವಿಮಾನವನ್ನು ಕರಾಚಿ ವಿಮಾನ ನಿಲ್ದಾಣದಿಂದ ಬಿಡಲಾಗಿತ್ತು. ವಿಮಾನದಲ್ಲಿ 91 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಪ್ರಯಾಣಿಸುತ್ತಿದ್ದರು.‌ ಅದರಲ್ಲಿ 97 ಪ್ರಯಾಣಿಕರು‌ ಮೃತಪಟ್ಟಿದ್ದಾರೆ.

ವಿಮಾನದ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡು ರನ್ ವೇ ಸಮೀಪವೇ ಇರುವ ಜನವಸತಿ ಪ್ರದೇಶ ಮಾಡೆಲ್ ಕಾಲನಿಯಲ್ಲಿ ವಿಮಾನ ಬಿದ್ದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...