alex Certify ಕೊರೋನಾ ಲಸಿಕೆ ಪಡೆದುಕೊಂಡ ಖ್ಯಾತ ನಟಿಗೆ ಬಿಗ್ ಶಾಕ್: ವ್ಯಾಕ್ಸಿನ್ ಬಳಿಕ ನಗ್ಮಾಗೆ ಕೋವಿಡ್ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಲಸಿಕೆ ಪಡೆದುಕೊಂಡ ಖ್ಯಾತ ನಟಿಗೆ ಬಿಗ್ ಶಾಕ್: ವ್ಯಾಕ್ಸಿನ್ ಬಳಿಕ ನಗ್ಮಾಗೆ ಕೋವಿಡ್ ಪಾಸಿಟಿವ್

ಮುಂಬೈ: ಖ್ಯಾತ ನಟಿ, ರಾಜಕಾರಣಿ ನಗ್ಮಾಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಂದ ಹಾಗೆ, ನಗ್ಮಾ ಕೊರೋನಾ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಮೊದಲ ಡೋಸ್ ಪಡೆದುಕೊಂಡ ನಂತರ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಗ್ಮಾ ಕೆಲವು ದಿನಗಳ ಹಿಂದೆ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದೆ. ಈಗ ಕೋವಿಡ್-19 ಪರೀಕ್ಷಿಸಲಾಗಿದ್ದು, ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಹೋಮ್ ಕ್ವಾರಂಟೈನ್ ನಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ.

ಲಸಿಕೆ ಪಡೆದುಕೊಂಡ ನಂತರವೂ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ. ನಿಯಮ ಪಾಲಿಸಿ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 2 ರಂದು ನಗ್ಮಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು. ನಂತರದಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿದ್ದು ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿದೆ.

ಇದಕ್ಕೆ ಮೊದಲು ನಟ ಪರೇಶ್ ರಾವಲ್ ಅವರಿಗೆ ಲಸಿಕೆ ಮೊದಲ ಡೋಸ್ ಪಡೆದ ನಂತರ ಕೋವಿಡ್ ಸೋಂಕು ತಗುಲಿರುವುದು ಕಂಡು ಬಂದಿತ್ತು. ಅಕ್ಷಯ್ ಕುಮಾರ್, ಗೋವಿಂದ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಆಲಿಯಾ ಭಟ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಕೋವಿಡ್ ಸೋಂಕು ತಗುಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...