alex Certify ಮದುವೆಯಾದ ಐದೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಐದೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ

ಬಚ್ನಾ ಎ ಹಸೀನೋ ಚಿತ್ರದ ಮೂಲಕ ಜನಪ್ರಿಯವಾದ ನಟಿ ಮಿನಿಷಾ ಲಾಂಬಾ ಸದ್ಯ ಸುದ್ದಿಯಲ್ಲಿದ್ದಾಳೆ. ಮದುವೆಯಾದ ಐದನೇ ವರ್ಷಕ್ಕೆ ಲಾಂಬಾ ವಿಚ್ಛೇದನ ಪಡೆಯುತ್ತಿದ್ದಾಳೆ. ಪತಿ ರಿಯಾನ್ ಥಾಮ್‌ ನಿಂದ ದೂರವಾಗ್ತಿದ್ದಾಳೆ.

ಮಿನಿಷಾ ಲಾಂಬಾ ಸಂದರ್ಶನವೊಂದರಲ್ಲಿ ಈ ವಿಷ್ಯವನ್ನು ದೃಢಪಡಿಸಿದ್ದಾರೆ. ಕಾನೂನು ಬದ್ಧವಾಗಿ ಇಬ್ಬರೂ ಬೇರೆಯಾಗ್ತಿದ್ದೇವೆಂದು ಮಿನಿಷಾ ಹೇಳಿದ್ದಾಳೆ. ಎರಡು ವರ್ಷಗಳ ಹಿಂದೆ 2018ರಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಈಗ ಮಿನಿಷಾ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

ಜುಲೈ 6,2015 ರಂದು ನಟಿ ಮದುವೆ ನಡೆದಿತ್ತು. 2013ರಲ್ಲಿ ಮೊದಲ ಭೇಟಿಯಾಗಿದ್ದ ಲಾಂಬಾ ನಂತ್ರ ರಿಯಾನ್ ನನ್ನು ಪ್ರೀತಿಸಲು ಶುರು ಮಾಡಿದ್ದಳು. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿರುವ ಮಿನಿಷಾ 2017ರಲ್ಲಿ ನಂತ್ರ ತೆರೆ ಮೇಲೆ ಕಾಣಿಸಿಕೊಂಡಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...