alex Certify ನಟಿ ಕೀರ್ತಿ ಸುರೇಶ್​ ದುಬೈ ಫೋಟೋ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕೀರ್ತಿ ಸುರೇಶ್​ ದುಬೈ ಫೋಟೋ ವೈರಲ್…!

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್​ ದುಬೈನಲ್ಲಿ ಸ್ನೇಹಿತರ ಗುಂಪಿನೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಫೋಟೋಗಳನ್ನ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ದುಬೈನಲ್ಲಿ ಕೀರ್ತಿ ಸುರೇಶ್​ & ಟೀಂ ಮಸ್ತ್​ ಮಜಾ ಮಾಡಿದೆ ಅನ್ನೋದನ್ನ ಈ ಫೋಟೋಗಳೇ ಸಾಬೀತುಪಡಿಸುತ್ತಿವೆ. ಸದ್ಯ ರಂಗ್​ ದೇ ಸಿನಿಮಾದಲ್ಲಿ ನಿತಿನ್​ ಜೋಡಿಯಾಗಿ ಕೀರ್ತಿ ಸುರೇಶ್​ ನಟಿಸುತ್ತಿದ್ದಾರೆ. ಈ ಸಿನಿಮಾಗೆ ವೆಂಕಿ ಅಟ್ಲುರಿ ಆಕ್ಷನ್​ ಕಟ್​ ಹೇಳಿದ್ದಾರೆ.

ಹಸಿರು ಬಣ್ಣದ ಧಿರಿಸಿನಲ್ಲಿ ಕೀರ್ತಿ ಸುರೇಶ್​ ಸಿಕ್ಕಾಪಟ್ಟೆ ಬ್ಯೂಟಿಫುಲ್​ ಆಗಿ ಕಾಣ್ತಾ ಇದ್ದು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಫೋಟೋದಲ್ಲಿ ಕೀರ್ತಿ ಮ್ಯಾನೇಜರ್​ ಜಗದೀಶ್​ರನ್ನೂ ನೀವು ನೋಡಬಹುದಾಗಿದೆ.

ಸಿನಿಮಾದ ಶೂಟಿಂಗ್​​ಗಾಗಿ ಸದ್ಯ ರಂಗ್​ ದೇ ಸಿನಿಮಾ ತಂಡ ದುಬೈನಲ್ಲಿ ಬೀಡು ಬಿಟ್ಟಿದೆ. ಶೂಟ್​ ಜೊತೆ ವೆಕೆಷನ್​ನ್ನೂ ಎಂಜಾಯ್​ ಮಾಡ್ತಿರುವ ಕೀರ್ತಿ ಸುರೇಶ್​​ ಶೂಟಿಂಗ್​ ಮಧ್ಯೆ ನಿದ್ದೆ ಮಾಡುತ್ತಿರುವ ಫೋಟೋವೊಂದನ್ನ ನಟ ನಿತಿನ್​ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದೇ ಫೋಟೋವನ್ನ ತನ್ನ ಖಾತೆಯಲ್ಲೂ ಶೇರ್ ಮಾಡಿರುವ ಕೀರ್ತಿ ಸುರೇಶ್​, ಈ ಫೋಟೋದ ಮೂಲಕ ಶೂಟಿಂಗ್​ ಮಧ್ಯೆ ನಿದ್ದೆ ಮಾಡಬಾರದು ಅನ್ನೋ ಪಾಠವನ್ನ ಕಲಿತಿದ್ದೇನೆ. ನನ್ನ ನಿದ್ದೆ ನೋಡಿ ನಿತಿನ್​​ಗೆ ಹೊಟ್ಟೆ ಉರಿಯಾಗಿದೆ ಅಲ್ವಾ..? ಸದ್ಯದಲ್ಲೇ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವೆ ಅಂತಾ ಬರೆದುಕೊಂಡಿದ್ದಾರೆ.

View this post on Instagram

A post shared by Keerthy Suresh (@keerthysureshofficial)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...