alex Certify ಬೀಚ್ ನೆನಪಿಸಿಕೊಂಡು ಬಿಕಿನಿ ಫೋಟೋ ಹಾಕಿದ ಬೆಡಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಚ್ ನೆನಪಿಸಿಕೊಂಡು ಬಿಕಿನಿ ಫೋಟೋ ಹಾಕಿದ ಬೆಡಗಿ

ಕೊರೊನಾ ವೈರಸ್ ಅನೇಕರನ್ನು ಮನೆಯಲ್ಲಿ ಬಂಧಿ ಮಾಡಿದೆ. ಬಾಲಿವುಡ್ ಸ್ಟಾರ್ಸ್ ಕೂಡ ಇದ್ರಿಂದ ಹೊರತಾಗಿಲ್ಲ. ಶೂಟಿಂಗ್ ಇಲ್ಲದ ಕಾರಣ ಹೊರಗೆ ಹೋಗುವಂತಿಲ್ಲ. ಲಾಕ್ ಡೌನ್ ವಿದೇಶ ಸುತ್ತುವಿಕೆಗೂ ಬ್ರೇಕ್ ಹಾಕಿದೆ.

ಇದು ಅನೇಕ ಕಲಾವಿದರ ಬೇಸರಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಲಾವಿದರು ತಮ್ಮ ಹಳೆ, ಹೊಸ ಫೋಟೋಗಳನ್ನು ಹಾಕಿ ಅಭಿಮಾನಿಗಳ ಕಣ್ಣು ತಂಪು ಮಾಡ್ತಿದ್ದಾರೆ.

ಈಗ ಈ ಪಟ್ಟಿಗೆ ನಟಿ ಇಲಿಯಾನಾ ಕೂಡ ಸೇರಿದ್ದಾಳೆ. ಮನೆಯಲ್ಲಿರುವ ಇಲಿಯಾನಾ ಸಮುದ್ರ ತೀರವನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾಳೆ. ಹಾಗಾಗಿ ತನ್ನ ಹಳೆ ಬಿಕಿನಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಬಿಳಿ ಬಣ್ಣದ ಬಿಕಿನಿಯಲ್ಲಿ ಹಾಟ್ ಆಗಿ ಕಾಣುವ ಇಲಿಯಾನಾ ಫೋಟೋ ವೈರಲ್ ಆಗಿದೆ.

ಈ ಫೋಟೋಕ್ಕೆ ನಾನು ಬೀಚ್ ಮಿಸ್ ಮಾಡಿಕೊಳ್ತಿದ್ದೇನೆಂದು ಇಲಿಯಾನಾ ಶೀರ್ಷಿಕೆ ಕೂಡ ಹಾಕಿದ್ದಾಳೆ. ಐದು ಲಕ್ಷಕ್ಕೂ ಹೆಚ್ಚು ಮಂದಿ ಇಲಿಯಾನಾ ಫೋಟೋವನ್ನು ಲೈಕ್ ಮಾಡಿದ್ದಾರೆ.

View this post on Instagram

I miss the beach. ? @colstonjulian

A post shared by Ileana D'Cruz (@ileana_official) on

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...