alex Certify ರೂಪಾ ಗಂಗೂಲಿ ಮಾತ್ರವಲ್ಲ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪಾ ಗಂಗೂಲಿ ಮಾತ್ರವಲ್ಲ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು

ಮಹಾಭಾರತವು ಡಿಡಿ ವಾಹಿನಿಯಲ್ಲಿ ಮರು ಪ್ರಸಾರವಾಗುತ್ತಿದ್ದಂತೆ 1980ರ ದಶಕದ ನೆನಪುಗಳ ಬುತ್ತಿ ಹೊರಬೀಳತೊಡಗಿದೆ. ಇದನ್ನು ಈಗಲೂ ಜನ ಇಷ್ಟಪಟ್ಟು ನೋಡುತ್ತಿದ್ದಾರೆ.

ಇದರಲ್ಲಿನ ಅನೇಕ ಪಾತ್ರಗಳು ಇಂದಿಗೂ ಜನಮಾನಸದಲ್ಲಿವೆ. ಈಗಿನ ವಿಷಯವೆಂದರೆ ಈ ಮಹಾಭಾರತದ ಧಾರವಾಹಿಗಳಲ್ಲಿ ದ್ರೌಪದಿ ಪಾತ್ರಧಾರಿಯಾಗಿ ನಟಿಸಿದ ನಟಿಮಣಿಯರು ಯಾರು ಯಾರು ಎಂಬ ಬಗ್ಗೆ ನೋಡೋಣ.

ರೂಪಾ ಗಂಗೂಲಿ ಮೊದಲಿಗೆ ಬಿ.ಆರ್. ಛೋಪ್ರಾ ಅವರು 1988ರಲ್ಲಿ ಆರಂಭಿಸಿದ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರವನ್ನು ನಿರ್ವಹಿಸಿದ್ದರು. ಅವರ ಬಳಿಕ ಫಲ್ಗುಣಿ ಪರೇಖ್ ಅವರು 1993ರಲ್ಲಿ ರಮಾನಂದ್ ಸಾಗರ್ ನಿರ್ಮಾಣದ ಶ್ರೀಕೃಷ್ಣ ಧಾರಾವಾಹಿಯ ದ್ರೌಪದಿ ಪಾತ್ರದಲ್ಲಿ ನಟಿಸಿದ್ದರು.

ಇನ್ನು 1997ರಲ್ಲಿ ಆರಂಭವಾದ ಏಕ್ ಔರ್ ಮಹಾಭಾರತ ಧಾರಾವಾಹಿಯಲ್ಲಿ ಅಶ್ವಿನಿ ಕಲ್ಸೇಕರ್ ದ್ರೌಪದಿಯಾಗಿ ಕಾಣಿಸಿಕೊಂಡರಾದರೂ ಕೇವಲ 14 ಎಪಿಸೋಡ್ ಆಗುವಷ್ಟರಲ್ಲಿ ಈ ಧಾರಾವಾಹಿಯನ್ನು ನಿಲ್ಲಿಸಲಾಯಿತು. 2001ರಲ್ಲಿ ಪ್ರಾರಂಭವಾದ ದ್ರೌಪದಿ ಧಾರಾವಾಹಿಯಲ್ಲಿ ಮ್ರಿನಾಲ್ ಕುಲಕರ್ಣಿ ಅವರು ಮುಖ್ಯ ಅವತರಣಿಕೆ (ದ್ರೌಪದಿಯಾಗಿ) ನಟಿಸಿದ್ದರು. ಈ ನಟನೆ ಇವರಿಗೆ ಸಾಕಷ್ಟು ಹೆಸರನ್ನೂ ತಂದು ಕೊಟ್ಟಿತ್ತು.

2008ರಲ್ಲಿ ಏಕ್ತಾ ಕಪೂರ್ ನಿರ್ಮಾಣದ ಕಹಾನಿ ಹಮಾರಾಯ್ ಮಹಾಭಾರತ್ ಕಿ ಧಾರಾವಾಹಿಯಲ್ಲಿ ಅನಿತಾ ಹಸ್ಸಾನಂದನಿ ದ್ರೌಪದಿಯಾಗಿ ನಟಿಸಿದ್ದರು. ಅಲ್ಲದೆ, ಈ ಧಾರಾವಾಹಿಯಲ್ಲಿ ನಟಿ ಮಾಡರ್ನ್ ಲುಕ್ ನಲ್ಲಿ ಮಾತ್ರ ಕಾಣುವುದಲ್ಲದೆ, ಭುಜದ ಬಳಿ ಟ್ಯಾಟೂವನ್ನೂ ಹಾಕಿಸಿಕೊಂಡಿದ್ದರು. ವೀಕ್ಷಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. 2013ರಲ್ಲಿ ಬಂದ ಮತ್ತೊಂದು ಮಹಾಭಾರತ ಧಾರಾವಾಹಿಯಲ್ಲಿ ಪೂಜಾ ಶರ್ಮ ದ್ರೌಪದಿಯಾಗಿ ನಟಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...