alex Certify ಬೆಂಗಳೂರಿನಲ್ಲಿರುವ ದೀಪಿಕಾ ಪಡುಕೋಣೆಗೆ ಕೊರೊನಾ: ಪತಿ ರಣವೀರ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಕಳವಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿರುವ ದೀಪಿಕಾ ಪಡುಕೋಣೆಗೆ ಕೊರೊನಾ: ಪತಿ ರಣವೀರ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಕಳವಳ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಪತಿ ರಣವೀರ್ ಸಿಂಗ್, ಲಾಕ್ ಡೌನ್ ಗೂ ಮುನ್ನವೆ ಮುಂಬೈ ಬಿಟ್ಟಿದ್ದಾರೆ. ಬಾಲಿವುಡ್ ಸೂಪರ್ ಜೋಡಿ ಅನೇಕ ದಿನಗಳಿಂದ ಬೆಂಗಳೂರಿನಲ್ಲಿದೆ. ವರದಿಗಳ ಪ್ರಕಾರ ದೀಪಿಕಾ ಪಡುಕೋಣೆ ತಂದೆ, ಅಮ್ಮ, ಸಹೋದರಿ ನಂತ್ರ ಈಗ ದೀಪಿಕಾಗೆ ಕೊರೊನಾ ಕಾಣಿಸಿಕೊಂಡಿದೆ. ದೀಪಿಕಾ ಪಡುಕೋಣೆ ಕೊರೊನಾ ಪಾಸಿಟಿವ್ ಎಂದು ಸೆಲೆಬ್ರಿಟಿ ಫೋಟೋಗ್ರಾಫರ್ ವಿರಲ್ ಭಯಾನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಅಭಿಮಾನಿಗಳು ನಟಿ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಹಾಗೆ ರಣವೀರ್ ಸಿಂಗ್ ಆರೋಗ್ಯದ ಬಗ್ಗೆ ಪ್ರಶ್ನೆ ಕೇಳ್ತಿದ್ದಾರೆ. ರಣವೀರ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿದೆ. ರಣವೀರ್ ಸಿಂಗ್ ಕೂಡ ಬೆಂಗಳೂರಿನಲ್ಲಿಯೇ ಇದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶ್ನೆ ಕೇಳ್ತಿದ್ದಾರೆ.

ರಣವೀರ್ ಸಿಂಗ್ ಹಾಗೂ ದೀಪಿಕಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮಂಗಳವಾರ ದೀಪಿಕಾ ಕುಟುಂಬದ ಎಲ್ಲರೂ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆನ್ನುವ ಬಗ್ಗೆ ವರದಿ ಬಂದಿತ್ತು. ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದು, ತಾಯಿ ಹಾಗೂ ಸಹೋದರಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...