alex Certify ವರ್ಚುವಲ್ ಫ್ಲಾಟ್ ಫಾರ್ಮ್ ನಲ್ಲಿ ಹಾಡಿದ ಹಿರಿಯ ನಟನ ಹಾಡು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಚುವಲ್ ಫ್ಲಾಟ್ ಫಾರ್ಮ್ ನಲ್ಲಿ ಹಾಡಿದ ಹಿರಿಯ ನಟನ ಹಾಡು ವೈರಲ್

ಮುಂಬೈ: ಬಾಲಿವುಡ್ ನಟ ಬೊಮನ್ ಇರಾನಿ ವರ್ಚುವಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಹಾಡಿದ ಹಾಡು ಬಾಲಿವುಡ್ ಸಂಗೀತ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.‌

1939 ರಲ್ಲಿ ಬಿಡುಗಡೆಯಾದ ‘ದ ವಿಜಾರ್ಡ್ ಆಫ್ ಓಜ್’ ಚಿತ್ರದಲ್ಲಿ ಜುಡಿ ಗಾರ್ಲ್ಯಾಂಡ್ ಅವರು ಹಾಡಿದ ಓವರ್ ದ ರೇನ್ಬೊ ಹಾಡನ್ನು ಇರಾನಿ ಹಾಡಿದ್ದಾರೆ.

ವಿಶೇಷ ಎಂದರೆ, ಪಕ್ಕ ವಾದ್ಯದವರು ಹಾಗೂ ಸಹ ಹಾಡುಗಾರರು ಒಟ್ಟಿಗಿಲ್ಲ. ಎಲ್ಲರೂ ತಮ್ಮ ಮನೆಯಲ್ಲೇ ಇದ್ದು, ವರ್ಚುವಲ್ ವೇದಿಕೆಯಲ್ಲಿ ಒಂದು ಸುಂದರ ಹಾಡು ರಚಿಸಿದ್ದಾರೆ. ಎಲ್ಲರೂ ಬೇರೆ ಬೇರೆ ಕಡೆ ಇದ್ದರೂ ಸಂಗೀತದಲ್ಲಿ ಸ್ವಲ್ಪವೂ ಲೋಪ ಇಲ್ಲದಂತೆ ಹಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.‌

ಕೊರೊನಾ ಮಹಾಮಾರಿ ಸಂಗೀತ, ನೃತ್ಯ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಬಂದ್ ಮಾಡಿದೆ. ಇದರಿಂದ, ಕಲಾವಿದರು ತಮ್ಮ ಕಲಾ ಪ್ರದರ್ಶನಗಳಿಗೆ ಆನ್ ಲೈನ್ ಮಾಧ್ಯಮಗಳನ್ನೇ ವೇದಿಕೆಯಾಗಿ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...