alex Certify ಕಾರ್ ನತ್ತ ತೆರಳುತ್ತಿದ್ದ ನಟಿ ಮೇಲೆ ಆಸಿಡ್ ದಾಳಿಗೆ ಯತ್ನ, ಅದೃಷ್ಟವಶಾತ್ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ನತ್ತ ತೆರಳುತ್ತಿದ್ದ ನಟಿ ಮೇಲೆ ಆಸಿಡ್ ದಾಳಿಗೆ ಯತ್ನ, ಅದೃಷ್ಟವಶಾತ್ ಪಾರು

ಬಾಲಿವುಡ್ ನಟಿ ಪಾಯಲ್ ಘೋಷ್ ಅವರ ಮೇಲೆ ಮುಸುಕುಧಾರಿಗಳು ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಔಷಧಿ ತರಲು ರಾತ್ರಿ 10 ಗಂಟೆ ವೇಳೆಗೆ ಮನೆಯಿಂದ ಹೊರಗೆ ಬಂದ ಪಾಯಲ್ ಘೋಷ್ ಔಷಧ ಖರೀದಿಸಿ ಕಾರಿನ ಸಮೀಪ ಹೋಗುತ್ತಿದ್ದಾಗ ಮುಸುಕುಧಾರಿಗಳಾಗಿ ಬಂದಿದ್ದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಆಸಿಡ್ ದಾಳಿ ಮಾಡಲು ಮುಂದಾಗಿದ್ದಾರೆ.

ರಾಡ್ ನಿಂದ ಹಲ್ಲೆ ಮಾಡಿದ್ದರಿಂದ ಪಾಯಲ್ ಘೋಷ್ ಅವರ ಕೈಗೆ ಪೆಟ್ಟುಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿರುವ ಪಾಯಲ್ ಘೋಷ್, ಔಷಧ ತರಲು ಹೋದಾಗ ನನ್ನ ಮೇಲೆ ದಾಳಿಗೆ ಯತ್ನಿಸಿದ್ದು, ದಾಳಿ ಮಾಡಿದವರ ಕೈಯಲ್ಲಿ ಬಾಟಲ್ ಇತ್ತು. ಅದು ಆಸಿಡ್ ಇರಬಹುದು ಎಂದು ಹೇಳಿದ್ದಾರೆ.

ದಾಳಿಯಿಂದ ಗಾಬರಿಗೊಂಡು ಜೋರಾಗಿ ಕೂಗಾಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ. ಪಶ್ಚಿಮಬಂಗಾಳದ ಪಾಯಲ್ ಘೋಷ್ ಮುಂಬೈನಲ್ಲಿ ನೆಲೆಸಿದ್ದಾರೆ. ಕನ್ನಡದ ‘ವರ್ಷಧಾರೆ’, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮತ್ತು ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...