alex Certify ದುಡುಕಿನ ನಿರ್ಧಾರ ಕೈಗೊಂಡ ನಟಿ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಡುಕಿನ ನಿರ್ಧಾರ ಕೈಗೊಂಡ ನಟಿ ಆತ್ಮಹತ್ಯೆ

ಮುಂಬೈ: ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಮೀರಾರೋಡ್ ಏರಿಯಾದಲ್ಲಿ ವಾಸವಾಗಿದ್ದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

40 ವರ್ಷದ ಅನುಪಮಾ ಪಾಠಕ್ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಬಿಹಾರ ಮೂಲದ ಅನುಪಮಾ ಹಲವು ಭೋಜ್ ಪುರಿ ಸಿನಿಮಾಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾನು ಮೋಸ ಹೋಗಿದ್ದು ಯಾರನ್ನೂ ನಂಬದ ಪರಿಸ್ಥಿತಿ ಇದೆ ಎಂದು ಸಾಯುವ ಮೊದಲು ಫೇಸ್ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪತಿ, ಮನೆಯಲ್ಲಿ ಇಲ್ಲದ ವೇಳೆ ಅವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನುಪಮಾ ಅವರ ಡೆತ್ ನೋಟ್ ದೊರೆತಿದೆ. ಆಕೆಗೆ ಗೆಳೆಯನೊಬ್ಬ ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಕೊರೋನಾ ಬಿಕ್ಕಟ್ಟಿನಿಂದಾಗಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...