alex Certify ನಟಿ ಶ್ರುತಿ ಹರಿಹರನ್ ಗೆ ನೋಟಿಸ್, ಮೀ ಟೂ ಆರೋಪದಿಂದ ನಟ ಅರ್ಜುನ್ ಸರ್ಜಾಗೆ ರಿಲೀಫ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶ್ರುತಿ ಹರಿಹರನ್ ಗೆ ನೋಟಿಸ್, ಮೀ ಟೂ ಆರೋಪದಿಂದ ನಟ ಅರ್ಜುನ್ ಸರ್ಜಾಗೆ ರಿಲೀಫ್…?

ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ಖ್ಯಾತ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಶ್ರುತಿ ಹರಿಹರನ್ ಮೀ ಟೂ ಆರೋಪ ಮಾಡಿದ್ದರು.

2018 ರಲ್ಲಿ ಅವರು ಮೀ ಟೂ ಆರೋಪ ಮಾಡಿದ್ದು, ಸಾಕ್ಷಿಗಾಗಿ ಬರೋಬ್ಬರಿ ಮೂರು ವರ್ಷಗಳ ಕಾಲ ಪೊಲೀಸರು ಕಾದಿದ್ದರು. ಇದುವರೆಗೂ ಪ್ರಕರಣದಲ್ಲಿ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಸಾಕ್ಷ್ಯ ಕೊರತೆ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿ ರಿಪೋರ್ಟ್ ತಯಾರಿಸಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ, ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ಸಾಕ್ಷ್ಯ ಕೊರತೆ ಹಿನ್ನಲೆಯಲ್ಲಿ ಅರ್ಜುನ್ ಸರ್ಜಾ ಅವರಿಗೆ ಈ ಮೀ ಟೂ ಪ್ರಕರಣದಲ್ಲಿ ರಿಲೀಫ್ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...