alex Certify ಈ ಕಾರಣಕ್ಕೆ ಅಕ್ಷಯ್ ಕುಮಾರ್ ನಿರಾಕರಿಸಿದ್ಲು ಮೊದಲ ಪ್ರೇಯಸಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಅಕ್ಷಯ್ ಕುಮಾರ್ ನಿರಾಕರಿಸಿದ್ಲು ಮೊದಲ ಪ್ರೇಯಸಿ…!

ಬಾಲಿವುಡ್ ನ ಪ್ರಸಿದ್ಧ ನಟ ಅಕ್ಷಯ್ ಕುಮಾರ್. ಆಕ್ಷನ್, ರೋಮ್ಯಾಂಟಿಕ್, ಕಾಮಿಡಿ ಯಾವುದೇ ನಟನೆಯನ್ನು ಸುಲಭವಾಗಿ ನಿಭಾಯಿಸಬಲ್ಲ ನಟ. ಅಕ್ಷಯ್ ಕುಮಾರ್ ರಂತಹ ಬಾಯ್ ಫ್ರೆಂಡ್ ಸಿಕ್ಕಿದ್ರೆ ಎಲ್ಲರೂ ಖುಷಿಪಡ್ತಾರೆ. ಆದ್ರೆ ಅಕ್ಷಯ್ ಕುಮಾರ್ ರನ್ನು ಅವ್ರ ಮೊದಲ ಪ್ರೇಯಸಿ ತಿರಸ್ಕರಿಸಿದ್ದಳಂತೆ. ಅದಕ್ಕೆ ಕಾರಣವೇನು ಎಂಬುದನ್ನು ಕಪಿಲ್ ಶರ್ಮಾ ಶೋದಲ್ಲಿ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಅಕ್ಷಯ್ ಕುಮಾರ್ ಮೊದಲ ಗೆಳತಿ ಜೊತೆ ಮೂರ್ನಾಲ್ಕು ಬಾರಿ ಡೇಟಿಂಗ್ ಗೆ ಹೋಗಿದ್ದರಂತೆ. ಕೆಲವು ಬಾರಿ ರೆಸ್ಟೋರೆಂಟ್ ಮತ್ತೆ ಕೆಲವು ಬಾರಿ ಸಿನಿಮಾಗೆ ಹೋಗಿದ್ದರಂತೆ. ಆದ್ರೆ ಕೆಲವೇ ದಿನಗಳಲ್ಲಿ ಗೆಳತಿ ಅಕ್ಷಯ್ ಬಿಟ್ಟು ಹೋಗಿದ್ದಳಂತೆ. ಅಕ್ಷಯ್ ಆ ಸಮಯದಲ್ಲಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರಂತೆ. ಅಕ್ಷಯ್ ಭುಜದ ಮೇಲೆ ಕೈ ಹಾಕ್ತಿರಲಿಲ್ಲವಂತೆ. ಕೈ ಹಿಡಿಯುತ್ತಿರಲಿಲ್ಲವಂತೆ. ಎಂದೂ ಮುತ್ತು ನೀಡಿರಲಿಲ್ಲವಂತೆ. ಅಕ್ಷಯ್ ಮುತ್ತು ಕೊಡಬೇಕೆಂದು ಗೆಳತಿ ಬಯಸಿದ್ದಳಂತೆ. ಇದು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಬಿಟ್ಟು ಹೋಗಿದ್ದಳಂತೆ.

ಇದ್ರಿಂದ ಏನು ಪಾಠ ಕಲಿತ್ರಿ ಎಂದು ಕಪಿಲ್ ಕೇಳ್ತಿದ್ದಂತೆ, ತಕ್ಷಣ ಉತ್ತರಿಸಿದ ಅಕ್ಷಯ್ ಕುಮಾರ್, ಯು-ಟರ್ನ್ ತೆಗೆದುಕೊಂಡೆ. ಸಂಪೂರ್ಣ ಬದಲಾದೆ ಎಂದರು. ಕೆಲ ದಿನಗಳ ಹಿಂದಷ್ಟೆ ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನಾ 20ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...