alex Certify ಮದುವೆ ಸಂಭ್ರಮದಲ್ಲಿ ಗಾಯಕ ಆದಿತ್ಯ ನಾರಾಯಣ್​ – ಶ್ವೇತಾ ಅಗರ್​ವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಂಭ್ರಮದಲ್ಲಿ ಗಾಯಕ ಆದಿತ್ಯ ನಾರಾಯಣ್​ – ಶ್ವೇತಾ ಅಗರ್​ವಾಲ್

ಹಿರಿಯ ಗಾಯಕ ಉದಿತ್​ ನಾರಾಯಣ್​ ಪುತ್ರ ಗಾಯಕ ಹಾಗೂ ನಿರೂಪಕ ಆದಿತ್ಯ ನಾರಾಯಣ್​ ಹಾಗೂ ಅವರ ಭಾವಿ ಪತ್ನಿ ಶ್ವೇತಾ ಅಗರ್​ವಾಲ್​ರ ಮದುವೆ ಸಂಭ್ರಮ ಶುರುವಾಗಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ತಿಲಕ್​ ಸಮಾರಂಭ ಏರ್ಪಡಿಸಿತ್ತು.

ಇದೀಗ ಈ ಕಾಕಾರ್ಯಕ್ರಮದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವಿಡಿಯೋದಲ್ಲಿ ಆದಿತ್ಯ ನಾರಾಯಣ್​ ಮರೂನ್​ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡರೆ ಶ್ವೇತಾ ಹಳದಿ ಬಂಗಾರ ಬಣ್ಣದ ಲೆಹೆಂಗಾದಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ.

ವಿಡಿಯೋದಲ್ಲಿ ಆದಿತ್ಯ ಹಾಗೂ ಶ್ವೇತಾ ಕುಟುಂಬಸ್ಥರು ಇರೋದನ್ನೂ ನೋಡಬಹುದಾಗಿದೆ.

ಆದಿತ್ಯ ಹಾಗೂ ಶ್ವೇತಾ ಜೋಡಿ ಡಿಸೆಂಬರ್​ 1 ಒಂದರಂದು ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಕೇವಲ 50 ಮಂದಿ ಮಾತ್ರ ಭಾಗಿಯಾಗಲಿದ್ದಾರೆ ಅಂತಾ ಆದಿತ್ಯ ಕುಟುಂಬಸ್ಥರು ಹೇಳಿದ್ದಾರೆ .

View this post on Instagram

A post shared by ♡☆?????? ???????☆♡ (@adityanarayanki_crazyfan_bubli)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...