alex Certify ಅಭಿಷೇಕ್​ ಬಚ್ಚನ್​ ಹೊಸ ರೂಪ ಕಂಡು ಫ್ಯಾನ್ಸ್​ ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಷೇಕ್​ ಬಚ್ಚನ್​ ಹೊಸ ರೂಪ ಕಂಡು ಫ್ಯಾನ್ಸ್​ ಶಾಕ್​..!

ಸರಿಯಾಗಿ ಒಂದು ವರ್ಷದ ಹಿಂದೆ ಬಾಲಿವುಡ್​ ನಟ ಶಾರೂಕ್​ ಖಾನ್​ ʼಬಾಬ್​ ಬಿಸ್ವಾಸ್ʼ​ ಎಂಬ ಚಿತ್ರವನ್ನ ಘೋಷಣೆ ಮಾಡಿದ್ದರು. ಈ ಸಿನಿಮಾದಲ್ಲಿ ಬಾಬ್​ ಬಿಸ್ವಾಸ್​ ಪಾತ್ರವನ್ನ ಸಾಸ್ವತಾ ಚಟರ್ಜಿ ನಿರ್ವಹಿಸ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಸಿನಿ ಪ್ರಿಯರ ಈ ಊಹೆ ಸುಳ್ಳಾಗಿದ್ದು ಈ ಪಾತ್ರವನ್ನ ಸಾಸ್ವತಾ ಚಟರ್ಜಿ ಬದಲಾಗಿ ಅಭಿಷೇಕ್​ ಬಚ್ಚನ್​ ನಿರ್ವಹಿಸುತ್ತಿದ್ದಾರೆ.

2012ರಲ್ಲಿ ವಿದ್ಯಾ ಬಾಲನ್​ ನಟನೆಯ ಕಹಾನಿ ಸಿನಿಮಾ ನೋಡಿದವರಿಗೆ ಈ ಬಾಬ್​ ಬಿಸ್ವಾಸ್​ ಪಾತ್ರದ ಬಗ್ಗೆ ನೆನಪಿದ್ದಿರಬಹುದು. ಎಲ್​ಐಸಿ ಏಜೆಂಟ್​ ಆಗಿದ್ದ ಬಾಬ್​ ವಿಸ್ವಾಸ್​​ ಸೀರಿಯಲ್​ ಕಿಲ್ಲರ್​ ಕೂಡ ಆಗಿದ್ದ. ಆತ ತನ್ನದೇ ಶೈಲಿಯಲ್ಲಿ ನಮಸ್ಕಾರ್​ ಹೇಳುವ ರೀತಿ ಸಿನಿ ಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಈ ಪಾತ್ರವನ್ನ ಸಾಸ್ವತಾ ಚಟರ್ಜಿ ಸಿಕ್ಕಾಪಟ್ಟೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕಹಾನಿ ಸಿನಿಮಾದ ಮುಂದಿನ ಭಾಗದಲ್ಲಿ ಈ ಪಾತ್ರದಲ್ಲಿ ಸಾಸ್ವತಾ ಚಟರ್ಜಿ ಬದಲು ಅಭಿಷೇಕ್​ ಬಚ್ಚನ್​ ಕಾಣಿಸಿಕೊಳ್ಳಲಿದ್ದಾರೆ.

ಪಾತ್ರಕ್ಕಾಗಿ ಅಭಿಷೇಕ್​ ಬಚ್ಚನ್​ ತಮ್ಮ ವೇಷ ಬದಲಾಯಿಸಿಕೊಂಡಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಭಿಷೇಕ್​ರ ಹೊಸ ರೂಪ ನೋಡಿದ ಅಭಿಮಾನಿಗಳು ಗುರು ಸಿನಿಮಾ ನೆನಪಿಗೆ ಬರ್ತಿದೆ ಅಂತಾ ಬರೆದುಕೊಂಡಿದ್ದಾರೆ.

View this post on Instagram

A post shared by Sangbad Pratidin (@sangbadpratidin)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...