alex Certify 20 ವರ್ಷಗಳ ಹಿಂದಿನ ‘ಧಡಕನ್’ ಚಿತ್ರದ ಗುಟ್ಟು ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳ ಹಿಂದಿನ ‘ಧಡಕನ್’ ಚಿತ್ರದ ಗುಟ್ಟು ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ

Dhadkan- Dil Ne Yeh Kaha Hai Dil Se

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟರಾದ ಅಕ್ಷಯ್ ಕುಮಾರ್ ಮತ್ತು ಸುನಿಲ್ ಶೆಟ್ಟಿ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಧಡಕನ್ 20 ವರ್ಷ ಪೂರೈಸಿದೆ. ಆಗಸ್ಟ್ 11, 2000 ದಂದು ಚಿತ್ರ ಬಿಡುಗಡೆಯಾಗಿತ್ತು.

ಚಿತ್ರತಂಡ 20 ವರ್ಷಗಳ ಸಂಭ್ರಮಾಚರಣೆ ಮಾಡಿದೆ. ನಟಿ ಶಿಲ್ಪಾ ಶೆಟ್ಟಿ 20 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಚಿತ್ರದ ಸಂಗೀತದ ಬಗ್ಗೆ ಅಕ್ಷಯ್ ಕುಮಾರ್ ಏನು ಹೇಳಿದ್ದರು ಎಂಬುದನ್ನು ಶಿಲ್ಪಾಶೆಟ್ಟಿ ಬಹಿರಂಗಪಡಿಸಿದ್ದಾರೆ. ಹಳೆ ಕ್ಲಿಪ್ ಒಂದನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ನಾನು ಹೆಚ್ಚು ಇಷ್ಟಪಟ್ಟಿದ್ದು ಹಾಡನ್ನು. ಅಕ್ಷಯ್ ಕುಮಾರ್ ಕೂಡ ಇದನ್ನೇ ಇಷ್ಟಪಟ್ಟಿದ್ದರು. ಹಾಡು ತುಂಬಾ ಸುಮಧುರವಾಗಿದೆ. 2020ರಲ್ಲೂ ಈ ಹಾಡು ಕಮಾಲ್ ಮಾಡಲಿದೆ ಎಂದು ಅಕ್ಷಯ್ ಹೇಳಿದ್ದರು ಎಂದು ಶಿಲ್ಪಾ ಹೇಳಿದ್ದಾರೆ.

ಈ ಕ್ಲಿಪ್ ನನ್ನನ್ನು ಎರಡು ದಶಕಗಳ ಹಿಂದೆ ತೆಗೆದುಕೊಂಡು ಹೋಗಿದೆ. ಆದ್ರೆ ಇಷ್ಟು ಬೇಗ 20 ವರ್ಷವಾಯ್ತು ಎಂಬುದನ್ನು ನಂಬುವುದು ಕಷ್ಟ. ಸಮಯ ಬೇಗ ಸರಿದುಹೋಗುತ್ತದೆ ಎನ್ನುವ ಅರ್ಥದಲ್ಲಿ ಶಿಲ್ಪಾ ಶೀರ್ಷಿಕೆ ಹಾಕಿದ್ದಾರೆ. ಚಿತ್ರದ ಬಗ್ಗೆ ನೆನಪು ಮಾಡಿಕೊಂಡಲ್ಲಿ ಅನೇಕ ವಿಷ್ಯಗಳು ಹಾದು ಹೋಗುತ್ತವೆ. ನನ್ನ ವೃತ್ತಿ ಜೀವನದ ದೊಡ್ಡ ಮೈಲಿಗಲ್ಲು ಇದು ಎಂದು ಶಿಲ್ಪಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...